ಕ್ರಿಕೆಟ್

ಭಾರತ vs ಇಂಗ್ಲೆಂಡ್: 150 ವಿಕೆಟ್ ಸಾಧನೆ, ಮಹಮದ್ ಶಮಿ ದಾಖಲೆ

Srinivas Rao BV

ಲಂಡನ್: ಭಾರತ-ಇಂಗ್ಲೆಂಡ್ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಎದುರಾಳಿ ತಂಡದ ವಿರುದ್ಧ ಭರ್ಜರಿ 10 ರನ್ ಗಳ ಜಯಗಳಿಸಿದೆ. 

ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ಲೈನ್ ಅತ್ಯುತ್ತಮವಾಗಿತ್ತು. ಭಾರತದ ಪರ ಬೌಲರ್ ಮೊಹಮ್ಮದ್ ಶಮಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಮೊಹಮ್ಮದ್ ಶಮಿ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ವೇಗಿಯಾಗಿದ್ದು, ಇದು ಲಂಡನ್ ನಲ್ಲಿ ನಡೆದ ಭಾರತ- ಇಂಗ್ಲೆಂಡ್ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ

ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತದ ಬೌಲರ್ ಗಳ ಆರ್ಭಟಕ್ಕೆ ಇಂಗ್ಲೇಂಡ್ ಬ್ಯಾಟ್ಸ್ಮನ್ ಗಳು ತತ್ತರಿಸಿದರು.

31 ರನ್ ಗಳನ್ನು ನೀಡಿ 3 ವಿಕೆಟ್ ಗಳಿಸಿದ ಮೊಹಮದ್ ಶಮಿ, ಈ ಪಂದ್ಯದ ಮೂಲಕ ಒಟ್ಟು 150 ವಿಕೆಟ್ ಗಳನ್ನು ಗಳಿಸಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ 150 ವಿಕೆಟ್ ಗಳಿಸಿದ ದಾಖಲೆ ಬರೆದಿದ್ದಾರೆ ಹಾಗೂ ಅಜಿತ್ ಅಗರ್ಕರ್ ಅವರ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ಅತ್ಯಂತ ವೇಗವಾಗಿ 150 ವಿಕೆಟ್ ಪಡೆದ ಮೂರನೇ ಭಾರತೀಯ ಜಹೀರ್ ಖಾನ್ ಅವರಾಗಿದ್ದಾರೆ.

ಏಕದಿನ ಫಾರ್ಮೆಟ್ ನಲ್ಲಿ ವೇಗವಾಗಿ 150 ವಿಕೆಟ್ ಪಡೆದ ಭಾರತೀಯ ಬೌಲರ್ ಗಳು
ಮೊಹಮ್ಮದ್ ಶಮಿ-80 ಪಂದ್ಯಗಳು 
ಅಜಿತ್ ಅಗರ್ಕರ್-97 ಪಂದ್ಯಗಳು
ಜಹೀರ್ ಖಾನ್-103 ಪಂದ್ಯಗಳು

ಕ್ರಿಕೆಟ್ ಜಗತ್ತಿನಲ್ಲಿ ಈ ಮೈಲಿಗಲ್ಲನ್ನು ವೇಗವಾಗಿ ತಲುಪಿದ ಮೂರನೇ ಅತ್ಯಂತ ವೇಗಿ ಆಟಗಾರ ಎಂಬ ಖ್ಯಾತಿಗೂ ಮೊಹಮ್ಮದ್ ಶಮಿ ಭಾಜನರಾಗಿದ್ದಾರೆ. ಹಾಗೂ ಈ ಸ್ಥಾನವನ್ನು ಅಫ್ಘಾನಿಸ್ಥಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ರಶೀದ್ ಖಾನ್ 80 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

SCROLL FOR NEXT