ಕ್ರಿಕೆಟ್

1st T20I: ವಿಂಡೀಸ್ ವಿರುದ್ಧ ಭಾರತಕ್ಕೆ 68 ರನ್ ಗಳ ಭರ್ಜರಿ ಜಯ

Srinivasamurthy VN

ಟ್ರಿನಿಡಾಡ್: ಏಕದಿನ ಸರಣಿ ಬೆನ್ನಲ್ಲೇ ಆರಂಭವಾಗಿರುವ ಟಿ20 ಸರಣಿಯಲ್ಲೂ ಭಾರತ ಭರ್ಜರಿ ಶುಭಾರಂಭ ಮಾಡಿದ್ದು, ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 68 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ ನೀಡಿದ 191 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ತಂಡ ಭಾರತೀಯ ಬೌಲರ್ ಗಳ ಸಾಂಘಿಕ ಪ್ರದರ್ಶನದಿಂದಾಗಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಬರೊಬ್ಬರಿ 68 ರನ್ ಗಳ ಅಂತರದಲ್ಲಿ ವಿಂಡೀಸ್ ಪಡೆ ಭಾರತಕ್ಕೆ ಶರಣಾಯಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆತಿಥೇಯ ತಂಡದ ವಿರುದ್ಧ ಉತ್ತಮ ಮೊತ್ತ ಕಲೆಹಾಕಿತ್ತು. ನಾಯಕ ರೋಹಿತ್ ಶರ್ಮಾ (64), ದಿನೇಶ್ ಕಾರ್ತಿಕ್ (41) ಮತ್ತು ಸೂರ್ಯಕುಮಾರ್ ಯಾದವ್ (24) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ, ಎದುರಾಳಿ ತಂಡಕ್ಕೆ 191 ರನ್‌ಗಳ ಬೃಹತ್ ಗುರಿ ನೀಡಿತ್ತು.

ಭಾರತ ನೀಡಿದ್ದ 191 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವೆಸ್ಟ್ ಇಂಡೀಸ್ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ಗಳು ಸಹ ಭಾರತದ ಬೌಲಿಂಗ್‌ಗೆ ಪ್ರತಿರೋಧ ತೋರದೆ ತರಗಲೆಗಳಂತೆ ವಿಕೆಟ್ ಕಳೆದುಕೊಂಡಿತು. 

ಕೈಲ್ ಮೇಯರ್ಸ್(15), ಶಮರ್ಹ್ ಬ್ರೂಕ್ಸ್ (20), ಜೇಸನ್ ಹೋಲ್ಡರ್ (0), ನಾಯಕ ನಿಕೋಲಸ್ ಪೂರನ್ (18), ರೋವ್ಮನ್ ಪೊವೆಲ್ (14), ಶಿಮ್ರಾನ್ ಹೆಟ್ಮೆಯರ್ (14), ಅಕೇಲ್ ಹೊಸೈನ್ (11), ಕೆಮೊ ಪೌಲ್ (19) ರನ್ ಗಳಿಸಿದರು. ಯಾವುದೇ ಹಂತದಲ್ಲೂ ಉತ್ತಮ ಜೊತೆಯಾಟ ನೀಡಲಿಲ್ಲ. ಅಂತಿಮವಾಗಿ ವಿಂಡೀಸ್ ಪಡೆ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಬರೊಬ್ಬರಿ 68 ರನ್ ಗಳ ಅಂತರದಲ್ಲಿ ವಿಂಡೀಸ್ ಪಡೆ ಭಾರತಕ್ಕೆ ಶರಣಾಯಿತು.

ಭಾರತದ ಪರ ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ 4 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ 4 ಓವರ್ ಬೌಲಿಂಗ್ ಮಾಡಿ 22 ರನ್ ನೀಡಿ 2 ವಿಕೆಟ್ ಪಡೆದರೆ, ರವಿ ಬಿಷ್ಣೋಯ್ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ಗೆಲುವಿನ ಕಾಣಿಕೆ ನೀಡಿದರು.
 

SCROLL FOR NEXT