ಸೌರವ್ ಗಂಗೂಲಿ 
ಕ್ರಿಕೆಟ್

ಇಂಗ್ಲೀಷ್ ಪ್ರೀಮಿಯರ್ ಲೀಗ್ ಗಿಂತ ಹೆಚ್ಚಿನ ಆದಾಯ ಐಪಿಎಲ್ ಗಳಿಸುತ್ತದೆ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಖ್ಯಾತ ಕ್ರೀಡಾ ಲೀಗ್ ಇಂಗ್ಲೀಷ್ ಪ್ರೀಮಿಯರ್ ಲೀಗ್ ಗಿಂತ ಹೆಚ್ಚಿನ ಆದಾಯವನ್ನು ಭಾರತದ ಟಿ20 ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಳಿಸುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

ಮುಂಬೈ: ಖ್ಯಾತ ಕ್ರೀಡಾ ಲೀಗ್ ಇಂಗ್ಲೀಷ್ ಪ್ರೀಮಿಯರ್ ಲೀಗ್ ಗಿಂತ ಹೆಚ್ಚಿನ ಆದಾಯವನ್ನು ಭಾರತದ ಟಿ20 ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಳಿಸುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಆಡುತ್ತಿದ್ದ ಕ್ರಿಕೆಟ್ ಆಟ ಈಗ ತುಂಬ ಬೆಳೆದಿದೆ. ಈ ಆಟವನ್ನು ಅಭಿಮಾನಿಗಳು, ದೇಶದ ಜನತೆಗಾಗಿ ಬಿಸಿಸಿಐ ನಡೆಸುತ್ತಿದೆ. ಈ ಕ್ರೀಡೆಯು ಇದೀಗ ಪ್ರಬಲವಾಗಿದೆ ಮತ್ತು ಮತ್ತಷ್ಟು ಬೆಳೆಯುತ್ತಿದೆ. ನಾನು ಇಷ್ಟಪಡುವ ಕ್ರೀಡೆಯು  ತುಂಬಾ ಪ್ರಬಲವಾಗುತ್ತಿರುವುದು ನನಗೆ ಸಂತೋಷ ಮತ್ತು ಹೆಮ್ಮೆಯನ್ನು ನೀಡುತ್ತದೆ. ನನ್ನಂತಹ ಆಟಗಾರರು ಕೆಲವು ನೂರುಗಳನ್ನು ಗಳಿಸಿದ್ದರೆ, ಈಗ ಕೋಟಿಗಳನ್ನು ಗಳಿಸುವ ಸಾಮರ್ಥ್ಯ ಗಳಿಸಿಕೊಂಡು ಆಟವು ವಿಕಸನೆಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ನಾಯಕತ್ವದ ಕುರಿತಾಗಿ ಮಾತನಾಡಿದ ಗಂಗೂಲಿ, ನಾನು ಭಾರತ ತಂಡದ ನಾಯಕನಾಗಿದ್ದಾಗ ಸಚಿನ್, ಅಜರ್, ದ್ರಾವಿಡ್ ರಂತವರು ತಂಡದಲ್ಲಿದ್ದರು. ನಾನು ಅವರೊಂದಿಗೆ ಸ್ಪರ್ಧಿಸಲಿಲ್ಲ; ಬದಲಾಗಿ, ನಾನು ಅವರೊಂದಿಗೆ ನಾಯಕರಾಗಿ ಸಹಕರಿಸಿದೆ ಮತ್ತು ಜವಾಬ್ದಾರಿಯನ್ನು  ಹಂಚಿಕೊಂಡಿದ್ದೇನೆ ಎಂದರು.

2022ರ ಐಪಿಎಲ್ ಕೂಟವು ಹಿಂದಿಗಿಂತಲೂ ದೊಡ್ಡದಾಗಿ ರೂಪಿಸಲಾಗಿತ್ತು. ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ಎರಡು ಹೊಸ ತಂಡಗಳಾಗಿ ಸೇರ್ಪಡೆಯಾಗಿದ್ದವು. ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ  ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ: ಮೊದಲ ಟಿ20 ಪಂದ್ಯ: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ ಗೆಲುವು; ಮಿಂಚಿದ ಡೇವಿಡ್ ಮಿಲ್ಲರ್, ಡುಸ್ಸೆನ್

ಸೌರವ್ ಗಂಗೂಲಿ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2003 ರ ವಿಶ್ವಕಪ್ ಫೈನಲ್‌ ಗೆ ಭಾರತವನ್ನು ಮುನ್ನಡೆಸಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT