ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಟಿ20 ವಿಶ್ವಕಪ್: ನೆದರ್ಲೆಂಡ್ ಸ್ಟಾರ್ ಆಟಗಾರ ಸ್ಟೀಫನ್ ಮೈಬರ್ಗ್ ನಿವೃತ್ತಿ!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಪಾಕಿಸ್ತಾನಕ್ಕೆ ಸೆಮೀಸ್ ಹಾದಿ ಸುಗಮ ಮಾಡಿಕೊಟ್ಟು ತನ್ನ ಅಭಿಯಾನ ಮುಕ್ತಾಯಗೊಳಿಸಿದ ನೆದರ್ಲ್ಯಾಂಡ್ಸ್ ತಂಡದ ಸ್ಟಾರ್ ಆಟಗಾರ ಸ್ಟೀಫನ್ ಮೈಬರ್ಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

Srinivasa Murthy VN
Updated On : 7 Nov 2022, 10:40 pm

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಪಾಕಿಸ್ತಾನಕ್ಕೆ ಸೆಮೀಸ್ ಹಾದಿ ಸುಗಮ ಮಾಡಿಕೊಟ್ಟು ತನ್ನ ಅಭಿಯಾನ ಮುಕ್ತಾಯಗೊಳಿಸಿದ ನೆದರ್ಲ್ಯಾಂಡ್ಸ್ ತಂಡದ ಸ್ಟಾರ್ ಆಟಗಾರ ಸ್ಟೀಫನ್ ಮೈಬರ್ಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ನೆದರ್ಲ್ಯಾಂಡ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀಫನ್ ಮೈಬರ್ಗ್ ಅವರು ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಸ್ಟೀಫನ್ ಮೈಬರ್ಗ್ ಅವರು ದಕ್ಷಿಣ ಆಫ್ರಿಕಾ ಮೂಲದವರಾಗಿದ್ದಾರೆ.

ಇದನ್ನೂ ಓದಿ: ಭಾರತ-ಪಾಕ್ ಫೈನಲ್ ಪಂದ್ಯ ನೋಡಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ: ಶೇನ್ ವ್ಯಾಟ್ಸನ್

Advertisement

Advertisement

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿವೃತ್ತಿ ಘೋಷಣೆ ಮಾಡಿರುವ ಸ್ಟೀಫನ್ ಮೈಬರ್ಗ್, 'ಬೂಟ್‌ಗಳನ್ನು ನೇತುಹಾಕಲಾಗುತ್ತಿದೆ....ದೇವರ ಮಹಿಮೆ!!! 17 ಸೀಸನ್‌ಗಳ ಹಿಂದೆ ನನ್ನ ಪ್ರಥಮ ದರ್ಜೆಯ ಚೊಚ್ಚಲ ಮತ್ತು 12 ಸೀಸನ್‌ಗಳ ಹಿಂದೆ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದ್ದೆ. ನನ್ನ ಮೂಲ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ವಿಶ್ವಕಪ್‌ನಲ್ಲಿ ನನ್ನ ವೃತ್ತಿಜೀವನವನ್ನು ಮುಗಿಸುತ್ತೇನೆ ಎಂದು ನನ್ನ ಕನಸಿನಲ್ಲಿ ಎಂದಿಗೂ ಊಹಿಸಿರಲಿಲ್ಲ. ಈ ಗೆಲುವು ಯಾವಾಗಲೂ ಹಸಿರಾಗಿರುತ್ತದೆ. ಒಬ್ಬ ಕ್ರೀಡಾಪಟು ಯಾವಾಗಲೂ ಗೆಲ್ಲಲು ಬಯಸುವಷ್ಟು ನನ್ನ ಪ್ರೀತಿಯ ದೇಶಕ್ಕಾಗಿ ನಾನು ಕಣ್ಣೀರು ಹಾಕಿದ್ದೇನೆ. ನೆದರ್ಲ್ಯಾಂಡ್ಸ್ ಗೆ ನಾನು ಕೃತಜ್ಞನಾಗಿದ್ದೇನೆ. ಈ ದೇಶ ಈಗ ನನ್ನ ಮನೆಯಾಗಿದೆ. ನನ್ನ ವೃತ್ತಿಜೀವನಕ್ಕೆ ಧನ್ಯವಾದ ಹೇಳಲು ಹಲವಾರು ಜನರನ್ನು ಹೊಂದಿದ್ದೇನೆ ಎಂದು ಹಲವರಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್: ಸಿಂಗಲ್ ರನ್ ನಂತರ ಏದುಸಿರು ಬಿಟ್ಟು, ಎದೆ ಹಿಡಿದುಕೊಂಡ ಕೊಹ್ಲಿ; ಮುಂದಿನ ಪಂದ್ಯಗಳಿಗೆ ಸಂಕಷ್ಟ!

38 ವರ್ಷದ ಮೈಬರ್ಗ್ 2011 ರಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದ್ದರು. ಅವರು ನೆದರ್ಲೆಂಡ್ ಪರ ಒಟ್ಟು 22 ಏಕದಿನ ಮತ್ತು 45 ಟಿ20 ಪಂದ್ಯಗಳನ್ನಾಡಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನಿಸಿದ ಅವರು 2006 ರಲ್ಲಿ SAA ಪ್ರಾಂತೀಯ ಟೂರ್ನಮೆಂಟ್ ನಲ್ಲಿ ನಾರ್ದರ್ನ್ಸ್‌ನಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು, ನೀಲ್ ವ್ಯಾಗ್ನರ್ ಮತ್ತು ಪಾಲ್ ಹ್ಯಾರಿಸ್ ಅವರಂತಹ ಆಟಗಾರರೊಂದಿಗೆ ಆಡಿದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ಮೈಬರ್ಗ್ ಈ ವರ್ಷದ ಆರಂಭದಲ್ಲಿ ಏಕದಿನ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು. 

ನೆದರ್ಲ್ಯಾಂಡ್ಸ್ ತನ್ನ ಅಂತಿಮ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 13 ರನ್‌ಗಳಿಂದ ಸೋಲಿಸಿದ ನಂತರ 2024ರ ಟಿ20 ವಿಶ್ವಕಪ್‌ಗೆ ನೇರ ಅರ್ಹತೆಯನ್ನು ಪಡೆದುಕೊಂಡಿತು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments