ಕ್ರಿಕೆಟ್

ಟಿ-20 ವಿಶ್ವಕಪ್: ಸೆಮಿಫೈನಲ್ ನಲ್ಲಿ ಸೂರ್ಯಕುಮಾರ್ ಶಾಟ್ ಹೊಡೆಯದಂತೆ ಕಟ್ಟಿಹಾಕುತ್ತೇವೆ- ಬೆನ್ ಸ್ಟೋಕ್ಸ್ 

Nagaraja AB

ಆಡಿಲೇಡ್: ಭಾರತ ವಿರುದ್ಧದ ಟಿ-20 ಸೆಮಿಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿಚಿತ್ರ  ರೀತಿಯ ಶಾಟ್ ಗಳನ್ನು ಹೊಡೆಯದಂತೆ ತಮ್ಮ ಬೌಲಿಂಗ್ ದಾಳಿಯಿಂದ ಅವರನ್ನು ಕಟ್ಟಿಹಾಕುವುದಾಗಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದ ಲೆಜೆಂಡ್ ಆಟಗಾರ ವಿರಾಟ್ ಕೊಹ್ಲಿ ಆಟಕ್ಕೂ ಪ್ರಶಂಸೆ ವ್ಯಕ್ತಪಡಿಸಿರುವ ಬೆನ್ ಸ್ಟೋಕ್ಸ್, ಗುರುವಾರ ನಡೆಯಲಿರುವ ಸೆಮಿ ಫೈನಲ್ ಪಂದ್ಯದಲ್ಲಿ ತಮ್ಮ ತಂಡ ಗೆಲ್ಲುವುದಾಗಿ  ಭರವಸೆ ವ್ಯಕ್ತಪಡಿಸಿದ್ದಾರೆ. 

ಸೂರ್ಯ ಕುಮಾರ್ ಯಾದವ್ ಅದ್ಬುತ ಆಟಗಾರ, ಅವರ ಕೆಲವು ಶಾಟ್ ಗಳನ್ನು ನೋಡಿದರೆ ಭಯವಾಗುತ್ತದೆ. ಅವರು ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೆ, ಅವರು ಆಕ್ರಮಣಕಾರಿಯಾಗದಂತೆ ತಡೆಯುತ್ತೇವೆ. ಅವರನ್ನು ಕಟ್ಟಿಹಾಕಲು ಪ್ರಯತ್ವಿಸುತ್ತಿವೆ ಎಂದು ಬೆನ್ಸ್  ಸುದ್ದಿಗಾರರಿಗೆ ತಿಳಿಸಿದರು.

ಕೊಹ್ಲಿ ಕುರಿತು ಮಾತನಾಡಿದ ಬೆನ್ಸ್, ಹಲವು ವರ್ಷಗಳಿಂದ ಅವರೊಂದಿಗೆ ಆಟವಾಡಿದ್ದು, ಅವರೊಬ್ಬ ಆರೋಗ್ಯಕಾರಿ ಎದುರಾಳಿ. ಎಲ್ಲಾ ರೀತಿಯ ಕ್ರಿಕೆಟ್ ನಲ್ಲೂ ಕೊಹ್ಲಿ ಚೆನ್ನಾಗಿ ಆಡಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ಆಡಿರುವಂತೆ ಕೊಹ್ಲಿ ಸೆಮಿಫೈನಲ್ ನಲ್ಲಿ ಆಡದಂತೆ ನಾವು ಮಾಡುತ್ತೇವೆ ಎಂದರು.  

ಉತ್ತಮ ರೀತಿಯಲ್ಲಿ ಆಡದಿದ್ದರೂ ಇಂಗ್ಲೆಂಡ್ ತಂಡ ಸೆಮಿಫೈನಲ್ ವರೆಗೂ ಬಂದಿದೆ. ಆದರೆ, ಸೆಮಿ ಫೈನಲ್ ಪಂದ್ಯ ಭಾರತ ತಂಡದ ಗೆಲ್ಲಲು ಅವಕಾಶ ಮಾಡಿಕೊಡಲ್ಲ ಎಂದು ಬೆನ್ಸ್ ಹೇಳಿದರು. ರೋಹಿತ್ ಶರ್ಮಾ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಆತ ವಿಶ್ವ ದರ್ಜೆಯ ಆಟಗಾರ. ಅವರನ್ನು ತುಂಬಾ ಹಗುರವಾಗಿ ಪರಿಗಣಿಸಲ್ಲ ಎಂದು ಬೆನ್ ಸ್ಟೋಕ್ಸ್ ಹೇಳಿದರು. 
 

SCROLL FOR NEXT