ಕ್ರಿಕೆಟ್

ಟ್ವೆಂಟಿ-20 ವಿಶ್ವಕಪ್: ಜಸ್ ಪ್ರೀತ್ ಬುಮ್ರಾ ಸ್ಥಾನಕ್ಕೆ ಮಹಮದ್ ಶಮಿ..?: ದ್ರಾವಿಡ್ ಹೇಳಿದ್ದೇನು?

Srinivasamurthy VN

ಇಂದೋರ್: ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿರುವ ಜಸ್ ಪ್ರೀತ್ ಬುಮ್ರಾ ಸ್ಥಾನಕ್ಕೆ ಹಿರಿಯ ವೇಗಿ ಮಹಮದ್ ಶಮಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಈ ಕುರಿತು ತಂಡದ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಮಾಹಿತಿ ನೀಡಿದ್ದಾರೆ.

ವೇಗದ ಬೌಲರ್  ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿರುವಂತೆಯೇ ಟ್ವೆಂಟಿ-20 ವಿಶ್ವಕಪ್‌ಗೆ ಭಾರತದ ಸಿದ್ಧತೆಗೆ ತೀವ್ರ ಹಿನ್ನಡೆಯಾಗಿದೆ. ಬಿಸಿಸಿಐ ಇನ್ನೂ ಬುಮ್ರಾ ಬದಲಿ ಆಟಗಾರನನ್ನು ಹೆಸರಿಸಿಲ್ಲ ಹಾಗೂ ವೇಗಿ ಸ್ಥಾನವನ್ನು ಯಾರು ತುಂಬಬಹುದು ಎಂಬ ಚರ್ಚೆ ವ್ಯಾಪಕವಾಗಿದೆ. ಟೀಮ್ ಇಂಡಿಯಾ ಮೂರನೇ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್‌ಗಳಿಂದ ಸೋತ ನಂತರ ಸುದ್ದಿಗೋಷ್ಠಿಯಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಬುಮ್ರಾ ಬದಲಿಗೆ ಮುಹಮ್ಮದ್ ಶಮಿ ಭಾರತ ತಂಡವನ್ನು ಸೇರಲಿದ್ದಾರೆಯೇ? ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಕೇಳಲಾಯಿತು.

“ಬುಮ್ರಾಗೆ ಬದಲಿ ಯಾರು ಎಂಬ ವಿಷಯದಲ್ಲಿನಾವು ಕಾದು  ನೋಡೋಣ. ನಮಗೆ ಅಕ್ಟೋಬರ್ 15 ರವರೆಗೆ ಸಮಯವಿದೆ. ಆದ್ದರಿಂದ ಶಮಿ ನಿಸ್ಸಂಶಯವಾಗಿ ಮೀಸಲು ಆಟಗಾರರಾಗಿ ನಮ್ಮೊಂದಿಗಿರುತ್ತಾರೆ. ಅವರಿಗೆ ಈ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಅವರು ಈ ಸಮಯದಲ್ಲಿ ಎನ್‌ಸಿಎಯಲ್ಲಿದ್ದರು.  ಅವರು ಹೇಗೆ ಚೇತರಿಸಿಕೊಳ್ಳುತ್ತಿದ್ದಾರೆ ಹಾಗೂ  14-15 ದಿನಗಳ ಕೋವಿಡ್ ನಂತರ ಅವರ ಸ್ಥಿತಿ ಏನು ಎಂಬುದರ ಕುರಿತು ನಾವು ವರದಿಗಳನ್ನು ಪಡೆಯಬೇಕಾಗಿದೆ. ವರದಿ ಬಂದ ಬಳಿಕ ಆಯ್ಕೆದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ದ್ರಾವಿಡ್ ಹೇಳಿದರು.
 

SCROLL FOR NEXT