ಕ್ರಿಕೆಟ್

ದೇಶದ ಮೊಟ್ಟ ಮೊದಲ ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಹರ್ಮನ್ ಪ್ರೀತ್ ಕೌರ್ ಭಾಜನ

Nagaraja AB

ನವದೆಹಲಿ: ಭಾರತದ ಸ್ಪೂರ್ತಿದಾಯಕ ನಾಯಕಿ ಹರ್ಮನ್‌ಪ್ರೀತ್ ಕೌರ್, 2022  ಸೆಪ್ಟೆಂಬರ್ ತಿಂಗಳ  ಐಸಿಸಿ ಮಹಿಳಾ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಪುರುಷರ ವಿಭಾಗದಲ್ಲಿ ಪ್ರಶಸ್ತಿ ವಿಜೇತರಾಗಿದ್ದಾರೆ. 1999 ರಿಂದಲೂ ಇಂಗ್ಲೆಂಡ್‌ನಲ್ಲಿ ತನ್ನ ತಂಡದ ಮೊದಲ ಏಕದಿನ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ  ಹರ್ಮನ್ ಪ್ರೀತ್ ಕೌರ್ ದೇಶದ ಮೊಟ್ಟ ಮೊದಲ ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹರ್ಮನ್ ಪ್ರೀತ್ ಕೌರ್ ಮೂರು ಪಂದ್ಯಗಳಲ್ಲಿ 103.47 ಸ್ಟ್ರೈಕ್ ರೇಟ್ ನಲ್ಲಿ 221 ರನ್ ಗಳಿಸಿದ್ದಾರೆ. ಒಮ್ಮೆ ಮಾತ್ರ ಔಟಾಗಿದ್ದರು. icc-cricket.com ನಲ್ಲಿ ನೋಂದಾಯಿಸಲಾದ ಮಾಧ್ಯಮ ಪ್ರತಿನಿಧಿಗಳು, ಐಸಿಸಿ ಹಾಲ್ ಆಫ್ ಫೇಮರ್ಸ್, ಮಾಜಿ ಅಂತರಾಷ್ಟ್ರೀಯ ಆಟಗಾರರು ಮತ್ತು ಅಭಿಮಾನಿಗಳ ನಡುವೆ ನಡೆದ ಜಾಗತಿಕ ಮತದಾನದಲ್ಲಿ ಕೌರ್, ಭಾರತ ದೇಶದವರೆ ಆದ ಸ್ಮೃತಿ ಮಂಧಾನ ಮತ್ತು ಬಾಂಗ್ಲಾದೇಶದ ನಾಯಕಿ ನಿಗರ್ ಸುಲ್ತಾನಾ ಅವರನ್ನು ಸೋಲಿಸುವ ಮೂಲಕ ತನ್ನ ಚೊಚ್ಚಲ ಗೆಲುವು ಸಾಧಿಸಿದ್ದಾರೆ.

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಅದ್ಭುತವಾಗಿದೆ ಅದನ್ನು ಗೆಲ್ಲುವುದು ಅದ್ಭುತ ಭಾವನೆ. ಸ್ಮೃತಿ ಮತ್ತು ನಿಗರ್ ಅವರೊಂದಿಗೆ ನಾಮನಿರ್ದೇಶನಗೊಂಡು ವಿಜೇತರಾಗಿ ಹೊರಹೊಮ್ಮಿರುವ ಖುಷಿಯಿದೆ. ನಾನು ಯಾವಾಗಲೂ ನನ್ನ ದೇಶವನ್ನು ಪ್ರತಿನಿಧಿಸುವುದರಲ್ಲಿ ಅಪಾರ ಹೆಮ್ಮೆಯನ್ನು ಹೊಂದಿದ್ದೇನೆ ಮತ್ತು ಇಂಗ್ಲೆಂಡ್‌ನಲ್ಲಿ ಐತಿಹಾಸಿಕ ಏಕದಿನ ಸರಣಿ ವಿಜಯ ನನ್ನ ವೃತ್ತಿಜೀವನದಲ್ಲಿ ನನಗೆ ಒಂದು ಹೆಗ್ಗುರುತು ಕ್ಷಣವಾಗಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ. 

SCROLL FOR NEXT