ಕೋಲ್ಕತ್ತಾ: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಕುರ್ಚಿ ಅಲುಗಾಡುತ್ತಿದೆ. ಅವರು ಅಧ್ಯಕ್ಷ ಸ್ಥಾನ ತೊರೆಯುವ ಕಾಲ ಸನಿಹಿತವಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಗಂಗೂಲಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ವರದಿಗಳ ಪ್ರಕಾರ, ಗಂಗೂಲಿ ಅವರು ಮಂಡಳಿಯ ಮುಖ್ಯಸ್ಥರಾಗಿ ಉಳಿಯಲು ಬಯಸಿದ್ದರು, ಆದರೆ ಅವರಿಗೆ ಯಾವುದೇ ಬೆಂಬಲ ಸಿಗಲಿಲ್ಲ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಗಂಗೂಲಿ ಅವರ ಹೇಳಿಕೆಯು ಬಿಸಿಸಿಐನಿಂದ ನಿರ್ಗಮಿಸುವ ನಿರ್ಧಾರವನ್ನು ಸ್ಪಷ್ಟಪಡಿಸಿದೆ.
ಕಾರ್ಯಕ್ರಮವೊಂದರಲ್ಲಿ ಹಾಲಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ನಾನೀಗ ಬೇರೇನಾದರೂ ಮಾಡಲಿರುವುದಾಗಿ ಹೇಳಿದ್ದಾರೆ. ನನ್ನ ಕ್ರಿಕೆಟ್ ಜೀವನದಲ್ಲಿ 15 ವರ್ಷಗಳು ಅದ್ಭುತವಾಗಿದ್ದವು. ಸಿಎಬಿ ಅಧ್ಯಕ್ಷ, ನಂತರ ಬಿಸಿಸಿಐ ಅಧ್ಯಕ್ಷ. ಈಗ ನಾನು ಬೇರೆ ಏನಾದರೂ ಮಾಡಬೇಕಿದೆ ಎಂದರು.
ನಾನು ದೇಶಕ್ಕಾಗಿ ಆಡಿದ್ದೆ. ಬಿಸಿಸಿಐ ಅಧ್ಯಕ್ಷನಾಗಿದ್ದೆ. ನಮ್ಮ ಜೀವನದಲ್ಲಿ ನಾವು ಏನೇ ಮಾಡಿದರೂ ಅದು ಅತ್ಯುತ್ತಮ ದಿನಗಳು. ಮುಂದೆಯೂ ದೊಡ್ಡ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ಆಯ್ಕೆ ಸಾಧ್ಯತೆ, ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ
ನಾನು ಕ್ರಿಕೆಟ್ ಆಡಳಿತಗಾರ ಎಂದು ಬಿಸಿಸಿಐ ಅಧ್ಯಕ್ಷರು ಹೇಳಿದ್ದಾರೆ. ಈ ಸಮಯದಲ್ಲಿ ಐಪಿಎಲ್, ಐಪಿಎಲ್ ಪ್ರಸಾರ ಹಕ್ಕು. ಅಂಡರ್ 19 ತಂಡ ವಿಶ್ವ ಚಾಂಪಿಯನ್ ಆಗುವುದು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಗೆಲುವು. ಆಸ್ಟ್ರೇಲಿಯಾದಲ್ಲಿ ಭಾರತದ ಗೆಲುವು ಹೀಗೆ ಹಲವು ಸಂಗತಿಗಳು ಈ ಸಮಯದಲ್ಲಿ ನಡೆದವು. ನಾನು ಎಂದಿಗೂ ಇತಿಹಾಸವನ್ನು ನಂಬುವುದಿಲ್ಲ ಎಂದು ಹೇಳಿದರು.
ಬಿನ್ನಿ ಬಿಸಿಸಿಐ ಅಧ್ಯಕ್ಷ?
ಭಾರತದ ಮಾಜಿ ಆಲ್ ರೌಂಡರ್ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಬಹುದು. ಅವರೂ ನಾಮಪತ್ರ ಸಲ್ಲಿಸಿದ್ದಾರೆ. ಅವರ ಮುಂದೆ ಬೇರೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯೂ ಇದೆ.