ಕ್ರಿಕೆಟ್

ಟಿ20 ವಿಶ್ವಕಪ್: ಇಂಗ್ಲೆಂಡ್ ಗೆಲುವು ಕಸಿದ ಮಳೆ: ಐರ್ಲೆಂಡ್ ಗೆ 5 ರನ್ ಗಳ ಜಯ

Srinivasamurthy VN

ಮೆಲ್ಬೋರ್ನ್: ಟಿ20 ವಿಶ್ವಕಪ್ ನ ಇಂದಿನ ಇಂಗ್ಲೆಂಡ್ vs ಐರ್ಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಐರ್ಲೆಂಡ್ ತಂಡ 5 ರನ್ ಗಳ ಅಂತರದ ಗೆಲುವು ಘೋಷಣೆ ಮಾಡಲಾಗಿದೆ.

ಮೆಲ್ಬೋನ್ರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ನೀಡಿದ 158ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 14.3 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 105ರನ್ ಗಳಿಸಿತ್ತು. ಈ ವೇಳೆ ಮಳೆ ಆರಂಭವಾಗಿ ಪಂದ್ಯಕ್ಕೆ ಅಡ್ಡಿ ಪಡಿಸಿತು. ಹೀಗಾಗಿ ಅಂಪೈರ್ ಗಳ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ರನ್ ರೇಟ್ ಆಧಾರದ ಮೇಲೆ ಐರ್ಲೆಂಡ್ ತಂಡವನ್ನು ಐದು ರನ್ ಗಳ ಅಂತರದಲ್ಲಿ ವಿಜಯಿ ಎಂದು ಘೋಷಣೆ ಮಾಡಿದ್ದಾರೆ.

ಡಕ್ವರ್ಥ್ ಲೂಯಿಸ್ ನಿಯಮದನ್ವಯ ಇಂಗ್ಲೆಂಡ್ ತಂಡ ಈ ಪಂದ್ಯ  ಗೆಲ್ಲಲು 14.3 ಓವರ್ ನಲ್ಲಿ 110 ರನ್ ಗಳಿಸಬೇಕಿತ್ತು. ಆದರೆ 105 ರನ್ ಗಳಿಸಿದ್ದ ಹಿನ್ನಲೆಯಲ್ಲಿ ಐದು ರನ್ ಗಳ ಅಂತರದಲ್ಲಿ ಕ್ರಿಕೆಟ್ ಶಿಶು ಐರ್ಲೆಂಡ್ ಅನ್ನು ವಿಜಯಿ ಎಂದು ಘೋಷಣೆ ಮಾಡಲಾಗಿದೆ. ಆ ಮೂಲಕ ಇಂಗ್ಲೆಂಡ್ ತಂಡಕ್ಕೆ ತೀವ್ರ ಮುಖಭಂಗವಾದಂತಾಗಿದೆ.
 

SCROLL FOR NEXT