ಕ್ರಿಕೆಟ್

ವೇತನ ಸಮಾನತೆ: ಪುರುಷರಷ್ಟೇ ಮಹಿಳಾ ಕ್ರಿಕೆಟಿಗರಿಗೂ ಸಮಾನ ಪಂದ್ಯ ಶುಲ್ಕ- ಬಿಸಿಸಿಐ ಘೋಷಣೆ

Nagaraja AB

ನವದೆಹಲಿ: ಕ್ರಾಂತಿಕಾರಕ ನಿರ್ಧಾರವೊಂದರಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಬಿಸಿಸಿಐ ಗುರುವಾರ ತನ್ನ ಕೇಂದ್ರೀಯ ಗುತ್ತಿಗೆ ಪಡೆದ ಮಹಿಳಾ ಮತ್ತು ಪುರುಷ ಆಟಗಾರರಿಗೆ ಸಮಾನ ಪಂದ್ಯ ಶುಲ್ಕವನ್ನು ಘೋಷಿಸಿದೆ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಬಿಸಿಸಿಐ ಮೊದಲ ಹೆಜ್ಜೆಯನ್ನಿಟ್ಟಿದೆ. ನಮ್ಮ ಗುತ್ತಿಗೆ ಪಡೆದ ಮಹಿಳಾ ಕ್ರಿಕೆಟ್ ಆಟಗಾರರಿಗೆ ಸಮಾನ ವೇತನವನ್ನು ಜಾರಿಗೊಳಿಸುತ್ತಿದ್ದೇವೆ. ನಾವು ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಹೋಗುತ್ತಿರುವುದರಿಂದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. 

ಹೊಸ ವ್ಯವಸ್ಥೆಯ ಪ್ರಕಾರ, ಭಾರತೀಯ ಮಹಿಳಾ ಕ್ರಿಕೆಟಿಗರು ಈಗ ಪುರುಷರಂತೆ ಪ್ರತಿ ಟೆಸ್ಟ್‌ ಪಂದ್ಯಕ್ಕೆ 15 ಲಕ್ಷ ರೂ. ಏಕದಿನ ಪಂದ್ಯಕ್ಕೆ 6 ಲಕ್ಷ ಮತ್ತು ಟಿ-20 ಪಂದ್ಯಕ್ಕೆ 3 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ನಮ್ಮ ಮಹಿಳಾ ಕ್ರಿಕೆಟಿಗರಿಗೆ ವೇತನ ಸಮಾನಗೊಳಿಸುವುದು ನನ್ನ ಬದ್ಧತೆಯಾಗಿತ್ತು. ಇದನ್ನು ಬೆಂಬಲಿಸಿದ ಅಪೆಕ್ಸ್ ಕೌನ್ಸಿಲ್ ಗೆ ಧನ್ಯವಾದ ಸಲ್ಲಿಸುವುದಾಗಿ ಜಯ್ ಶಾ ಟ್ವೀಟ್  ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ದೇಶದ ಆಟಗಾರರ ಸಂಘದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದು ಪುರುಷ ಆಟಗಾರರಿಗಿಂತ ಹೆಚ್ಚು ಸಂಪಾದನೆ ಮಾಡಲು ಮಹಿಳಾ ಆಟಗಾರ್ತಿಯರಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ಮಧ್ಯೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡಾ ಲಿಂಗ ಅಸಮಾನತೆಯನ್ನು ತೊಡೆದುಹಾಕುವ ಕೆಲಸ ಮಾಡುತ್ತಿದೆ. 

SCROLL FOR NEXT