ಕ್ರಿಕೆಟ್

ಏಷ್ಯಾ ಕಪ್ 2022: ಮೈದಾನದಲ್ಲಿ ದುರ್ವರ್ತನೆ ತೋರಿದ ಪಾಕ್-ಆಫ್ಘಾನ್ ಆಟಗಾರರ ವಿರುದ್ಧ ಐಸಿಸಿ ಕ್ರಮ!

Vishwanath S

ಏಷ್ಯಾ ಕಪ್ ಟೂರ್ನಿ ವೇಳೆ ಮೈದಾನದಲ್ಲಿ ದುರ್ವರ್ತನೆ ತೋರಿದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಆಟಗಾರರ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ. 

ಆಫ್ಘಾನಿಸ್ತಾದ ಬೌಲರ್ ಫರೀದ್ ಅಹ್ಮದ್ ಮತ್ತು ಪಾಕಿಸ್ತಾನದ ಬ್ಯಾಟರ್ ಆಸಿಫ್ ಅಲಿ ಇಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಈ ಇಬ್ಬರೂ ಆಟಗಾರರ ವರ್ತನೆಯನ್ನು ಗಮನಿಸಿದ್ದ ಕ್ರಿಕೆಟ್ ಪಂಡಿತರು ಇವರನ್ನು ಕ್ರಿಕೆಟ್​ನಿಂದ ನಿಷೇಧಿಸಬೇಕೆಂಬ ಒತ್ತಾಯವನ್ನು ಐಸಿಸಿ ಮೇಲೆ ಹೇರಿದ್ದರು. ಆದರೆ ಐಸಿಸಿ ಘಟನೆಯನ್ನು ಕುಲಂಕುಶವಾಗಿ ಪರಿಶೀಲಿಸಿ ಆರ್ಥಿಕ ರೂಪದಲ್ಲಿ ಕ್ರಮ ಕೈಗೊಂಡಿದ್ದು ಉಭಯ ಆಟಗಾರರಿಗೂ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.6 ಅನ್ನು ಆಸಿಫ್ ಉಲ್ಲಂಘಿಸಿದ್ದಾರೆ. ಈ ನಿಯಮ 'ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಅವಮಾನಕರವಾದ ಗೆಸ್ಚರ್ ಅನ್ನು ಬಳಸುವುದಕ್ಕೆ ಸಂಬಂಧಿಸಿದೆ. ಜೊತೆಗೆ ಫರೀದ್ ಕೂಡ ಆರ್ಟಿಕಲ್ 2.1.12 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಹೀಗಾಗಿ ಇಬ್ಬರಿಗೂ ಪಂದ್ಯ ಶುಲ್ಕದ ಶೇ.25ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ ಎಂದು ಐಸಿಸಿ ಹೇಳಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದ 19ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಆಸಿಫ್ ಅಲಿ ಸಿಕ್ಸರ್ ಬಾರಿಸಿದ್ದರು. ನಂತರದ ಎಸೆತದಲ್ಲಿ ಅಲಿ ಔಟಾದರು. ಈ ವೇಳೆ ಬೌಲರ್ ಫರೀದ್ ಅಹ್ಮದ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದು ಇದನ್ನು ಸಹಿಸಲಾಗದ ಆಸಿಫ್ ಅಲಿ ಬೌಲರ್ ಮೇಲೆ ಕೈ ಎತ್ತಿದ್ದರು. ಅಷ್ಟೇ ಅಲ್ಲದೆ ಹೊಡೆಯಲು ಕೈಯಲ್ಲಿದ್ದ ಬ್ಯಾಟ್ ಅನ್ನು ಮೇಲಕ್ಕೆ ಎತ್ತಿದರು. ಈ ವಿಡಿಯೋ ವೈರಲ್ ಆಗಿತ್ತು.

SCROLL FOR NEXT