ಕ್ರಿಕೆಟ್

ಟಿ20 ವಿಶ್ವಕಪ್ ವಿಜೆತ ತಂಡಕ್ಕೆ 1.6 ಮಿಲಿಯನ್ ಡಾಲರ್ ಬಹುಮಾನ: ಐಸಿಸಿ

Srinivas Rao BV

ದುಬೈ: ಟಿ20 ವಿಶ್ವಕಪ್ ವಿಜೇತ ತಂಡ 1.6 ಮಿಲಿಯನ್ ಬಹುಮಾನ ಪಡೆಯಲಿದೆ ಎಂದು ಐಸಿಸಿ ಘೋಷಣೆ ಮಾಡಿದೆ. ರನ್ನರ್ ಅಪ್ ತಂಡಕ್ಕೆ ವಿಜೇತ ತಂಡಕ್ಕಿಂತ ಅರ್ಧದಷ್ಟು ಮೊತ್ತದ ಬಹುಮಾನ ದೊರೆಯಲಿದೆ.

16 ತಂಡಗಳು ಭಾಗಿಯಾಗಲಿರುವ ಟೂರ್ನಮೆಂಟ್ ಹತ್ತಿರ ಹತ್ತಿರ ಒಂದು ತಿಂಗಳು ನಡೆಯಲಿದ್ದು, ಸೆಮಿಫೈನಲ್ಸ್ ನಲ್ಲಿ ಸೋಲುವ ತಂಡಕ್ಕೆ 400,000 ಡಾಲರ್ ಗಳ ಬಹುಮಾನವನ್ನು ಗೆದ್ದಿದ್ದಾರೆ. ಸೂಪರ್ 12 ಹಂತದಲ್ಲಿ ನಿರ್ಗಮಿಸುವ 8 ತಂಡಗಳಿಗೆ ತಲಾ 70,000 ಬಹುಮಾನ ದೊರೆಯಲಿದೆ.

ಕಳೆದ ವರ್ಷದ ಐಸಿಸಿ ಪುರುಷರ ಟಿ20 ವಿಶ್ವಕಪ್ ನಂತೆ ಸೂಪರ್ 12 ಹಂತದಲ್ಲಿ 30 ಪಂದ್ಯಗಳ ಪೈಕಿ ಪ್ರತಿ ಗೆಲುವಿಗೂ 40,000 ಅಮೇರಿಕನ್ ಡಾಲರ್ ಬಹುಮಾನ ದೊರೆಯಲಿದೆ ಎಂದು ಐಸಿಸಿ ಹೇಳಿದೆ. ಸೂಪರ್ 12 ಹಂತಕ್ಕೆ ನೇರವಾಗಿ ಆಯ್ಕೆಯಾಗಿರುವ ತಂಡಗಳೆಂದರೆ ಅದು ಅಫ್ಘಾನಿಸ್ಥಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂ ಜಿಲ್ಯಾಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾಗಳಾಗಿವೆ.

ಗ್ರೂಪ್ ಎ ನಲ್ಲಿ ನಮೀಬಿಯಾ, ಶ್ರೀಲಂಕಾ, ನೆದರ್ಲ್ಯಾಂಡ್, ಯುಎಇ ಹಾಗೂ ಗ್ರೂಪ್ ಬಿ ನಲ್ಲಿ ವೆಸ್ಟ್ ಇಂಡೀಸ್, ಸ್ಕಾಟ್ ಲ್ಯಾಂಡ್, ಐರ್ಲ್ಯಾಂಡ್, ಜಿಂಬಾಂಬ್ವೆ ಗಳನ್ನು ನಾಲ್ಕು ತಂಡಗಳಿರುವಂತೆ 2 ಗುಂಪುಗಳನ್ನಾಗಿ ವಿಭಾಗಿಸಲಾಗಿದ್ದು, ಮೊದಲ ಹಂತದಲ್ಲಿ ಆಡಲಿವೆ. ಮೊದಲ ಹಂತದಲ್ಲಿ ಯಾವುದೇ ಗೆಲುವಿಗೆ 40,000 ಅಮೇರಿಕನ್ ಡಾಲರ್ ಬಹುಮಾನವನ್ನು ಘೋಷಿಸಲಾಗುತ್ತದೆ,  12 ಪಂದ್ಯಗಳಿಗೆ 480,000 ಅಮೇರಿಕನ್ ಡಾಲರ್ ಬಹುಮಾನ ಪಡೆಯಲಿವೆ. ಟಿ20 ವಿಶ್ವಕಪ್ ಅ.16 ರಿಂದ ನವೆಂಬರ್ 13 ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

SCROLL FOR NEXT