ಪಂಜಾಬ್ ಕಿಂಗ್ಸ್ 
ಕ್ರಿಕೆಟ್

IPL 2023: ಪಂದ್ಯಕ್ಕೆ ಮಳೆ ಅಡ್ಡಿ; ಡಕ್ವರ್ತ್ ಲೂಯಿಸ್ ಪ್ರಕಾರ KKR ವಿರುದ್ಧ 7 ರನ್ ನಿಂದ ಗೆದ್ದ ಪಂಜಾಬ್ ಕಿಂಗ್ಸ್!

ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಡಕ್ವರ್ತ್ ಲೂಯಿಸ್ ಪ್ರಕಾರ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ 7 ರನ್ ನಿಂದ ಗೆಲುವು ಸಾಧಿಸಿದ್ದಾರೆ.

ಮೊಹಾಲಿ: ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಡಕ್ವರ್ತ್ ಲೂಯಿಸ್ ಪ್ರಕಾರ ಕೆಕೆಆರ್ ವಿರುದ್ಧ ಪಂಜಾಬ್ ಕಿಂಗ್ಸ್ 7 ರನ್ ನಿಂದ ಗೆಲುವು ಸಾಧಿಸಿದ್ದಾರೆ.

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 20 ಓವರ್ ಗಳಲ್ಲಿ 191 ರನ್ ಗಳಿಸಿತು. ಮಳೆಯ ಕಾರಣಕ್ಕೆ ಪಂದ್ಯವನ್ನು ನಿಲ್ಲಿಸಲಾಯಿತು. ಈ ವೇಳೆ ಪಂದ್ಯ ಗೆಲ್ಲಲು ಕೆಕೆಆರ್ ಗೆ ಡಕ್ವರ್ತ್ ಲೂಯಿಸ್ ವಿಧಾನದ ಪ್ರಕಾರ 16 ಓವರ್‌ಗಳಲ್ಲಿ 154 ರನ್ ಗಳಿಸಬೇಕಾಗಿತ್ತು. ಆದರೆ ತಂಡವು 146/7 ಸ್ಕೋರ್ ಮಾತ್ರ ಸಿಡಿಸಿದ್ದರಿಂದ 7 ರನ್ ಗಳಿಂದ ಸೋಲು ಅನುಭವಿಸಬೇಕಾಯಿತು.

ಪಂಜಾಬ್ ಪರ ರಾಜಪಕ್ಸೆ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಪಂಜಾಬ್ ಗೆಲುವಿಗೆ ಅಡಿಪಾಯ ಹಾಕಿದರೆ. ನಂತರ ನಾಯಕ ಶಿಖರ್ ಧವನ್ 29 ಎಸೆತಗಳಲ್ಲಿ 6 ಬೌಂಡರಿ ಸಹಿತ 40 ರನ್ ಗಳಿಸಿದರು.

ಕೆಕೆಆರ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು ಆದರೆ ಪಂಜಾಬ್ ಮೊದಲ ಎಸೆತದಿಂದಲೇ ಆಕ್ರಮಣಕಾರಿ ವಿಧಾನವನ್ನು ಅನುಸರಿಸಿತು. ಆರಂಭಿಕ ಆಟಗಾರ ಪ್ರಭಾಸಿಮ್ರಾನ್ ಸಿಂಗ್ 12 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 23 ರನ್ ಗಳಿಸಿದರು, ಆದರೆ ಅವರು ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರು.

ಕೆಕೆಆರ್‌ ಪರ ಗುರಿ ಬೆನ್ನತ್ತಿದ ಆಂಡ್ರೆ ರಸೆಲ್ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಆದರೆ ಸ್ಯಾಮ್ ಕರನ್ ಅವರನ್ನು 15ನೇ ಓವರ್‌ನಲ್ಲಿ ಔಟ್ ಮಾಡುವ ಮೂಲಕ ಪಂಜಾಬ್ ಗೆಲುವಿನ ಭರವಸೆಗೆ ಇಂಬು ನೀಡಿದರು. ರಸೆಲ್ 19 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 35 ರನ್ ಗಳಿಸಿ ಔಟಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!