ಕ್ರಿಕೆಟ್

ಐಪಿಎಲ್ ರೋಚಕ ಹಣಾಹಣಿ: ಆರ್ ಸಿಬಿ-ಎಲ್ ಎಸ್ ಜಿ ಪಂದ್ಯ "ಪೂರನ್ ಆಹುತಿ": ಎಲ್ ಎಸ್ ಜಿಗೆ 1 ವಿಕೆಟ್ ಗೆಲುವು

Srinivas Rao BV

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ- ಲಖನೌ ಸೂಪರ್ ಜೈಂಟ್ಸ್ ಹೈವೋಲ್ಟೇಜ್ ಪಂದ್ಯದಲ್ಲಿ ಎಲ್ ಎಸ್ ಜಿಗೆ ಕೊನೆಯ ಎಸೆತದಲ್ಲಿ 1 ವಿಕೆಟ್ ಅಂತರದ ಗೆಲುವು ದಕ್ಕಿದೆ. 

ಕೊನೆಯ ಕ್ಷಣದ ವರೆಗೂ ಉಭಯ ತಂಡಗಳೂ ಗೆಲುವಿಗಾಗಿ ಹೋರಾಡಿದವು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ ಲಖನೌಗೆ ಗೆಲುವಿಗೆ 213 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಲಖನೌ ತಂಡದ ಬ್ಯಾಟ್ಸ್ಮನ್ ಗಳ ಮೇಲೆ ಆರ್ ಸಿಬಿ ಬೌಲರ್ ಗಳು ಆರಂಭದಲ್ಲಿ ನಿಯಂತ್ರಣ ಸಾಧಿಸಿದರಾದರೂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಮಾರ್ಕಸ್ ಸ್ಟೊಯಿನಿಸ್ (30 ಎಸೆತಗಳಲ್ಲಿ 65 ರನ್)- ನಿಕೋಲಾಸ್ ಪೂರನ್ (19 ಎಸೆತಗಳಲ್ಲಿ 62 ರನ್) ಸ್ಫೋಟಕ ಬ್ಯಾಟಿಂಗ್ ಹಾಗೂ ಜೊತೆಯಾಟವನ್ನು ನಿಯಂತ್ರಿಸುವಲ್ಲಿ ಆರ್ ಸಿಬಿ ಬೌಲರ್ ಗಳು ವಿಫಲರಾದರು.  ಈ ಇಬ್ಬರೂ ಬ್ಯಾಟ್ಸ್ ಮನ್ ಗಳ ಜೊತೆಯಾಟ ಮುರಿಯುವುದಕ್ಕೆ ಆರ್ ಸಿಬಿ ಬೌಲರ್ ಗಳು ಹೆಣಗಿದರು. 

ಬಳಿಕ ಆಯುಷ್ ಬದೋನಿ (24 ಎಸೆತಗಳಲ್ಲಿ 30 ರನ್) ತಂಡಕ್ಕೆ ಚೇತರಿಕೆ ನೀಡಿದರು. ಕೊನೆಯ ಕ್ಷಣದವರೆಗೂ ಆರ್ ಸಿಬಿ ಬೌಲರ್ ಗಳು ಸಾಲಾಗಿ ವಿಕೆಟ್ ಪಡೆಯುವ ಮೂಲಕ ಲಖನೌ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೇರಲು ಯತ್ನಿಸಿದರು. ಪರಿಣಾಮವಾಗಿ ಕೊನೆಯ ಎಸೆತದವರೆಗೂ ಗೆಲುವಿನ ಅಂಶ ಚಂಚಲವಾಗಿತ್ತು. ಕೊನೆಯ ಎಸೆತಕ್ಕೂ ಮುನ್ನ ಆರ್ ಸಿಬಿ ಬೌಲರ್ ಗಳ ರನ್ ಔಟ್ ಯತ್ನ ವಿಫಲವಾಯಿತು. 9 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದ ಎಲ್ ಎಸ್ ಜಿ ಗೆ ಕೊನೆಯ ಎಸೆತದಲ್ಲಿ ಗೆ ಗೆಲುವು ದಕ್ಕಿತು. 

SCROLL FOR NEXT