ಪಾಕ್ ತಂಡದ ಸಾಂದರ್ಭಿಕ ಚಿತ್ರ 
ಕ್ರಿಕೆಟ್

2023 ಏಕದಿನ ವಿಶ್ವಕಪ್: ಭಾರತದ ಈ ಎರಡು ನಗರಗಳಿಗೆ ಮಾತ್ರ ಪಾಕ್ ಆದ್ಯತೆ!

2023ರ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಮಾತ್ರ ಆಡಲು ಪಾಕಿಸ್ತಾನ ಆದ್ಯತೆ ನೀಡುತ್ತದೆ. ಈ ಹಿಂದಿನ ಪ್ರವಾಸದ ಸಂದರ್ಭದಲ್ಲಿ ಈ ಎರಡು ನಗರಗಳು ಸುರಕ್ಷಿತವೆಂದು ಪಾಕ್ ತಂಡ ಭಾವಿಸಿರುವುದಾಗಿ ಐಸಿಸಿ ಮೂಲಗಳು ಹೇಳಿವೆ.

ನವದೆಹಲಿ: 2023ರ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಮಾತ್ರ ಆಡಲು ಪಾಕಿಸ್ತಾನ ಆದ್ಯತೆ ನೀಡುತ್ತದೆ. ಈ ಹಿಂದಿನ ಪ್ರವಾಸದ ಸಂದರ್ಭದಲ್ಲಿ ಈ ಎರಡು ನಗರಗಳು ಸುರಕ್ಷಿತವೆಂದು ಪಾಕ್ ತಂಡ ಭಾವಿಸಿರುವುದಾಗಿ ಐಸಿಸಿ ಮೂಲಗಳು ಹೇಳಿವೆ.

ಅಹಮದಾಬಾದ್, ಲಕ್ನೋ, ಮುಂಬೈ, ರಾಜ್‌ಕೋಟ್, ಬೆಂಗಳೂರು, ದೆಹಲಿ, ಇಂದೋರ್, ಗುವಾಹಟಿ ಮತ್ತು ಹೈದರಾಬಾದ್, ಧರ್ಮಶಾಲಾ ಸೇರಿದಂತೆ ಭಾರತದ 12 ನಗರಗಳಲ್ಲಿ 46 ಪಂದ್ಯಗಳೊಂದಿಗೆ ಅಕ್ಟೋಬರ್ 5 ರಂದು ವಿಶ್ವಕಪ್ ಪಂದ್ಯಾವಳಿ ತಾತ್ಕಾಲಿಕವಾಗಿ ಪ್ರಾರಂಭವಾಗಲಿದೆ.

ಈ ವಿಷಯದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಮುಖರು ಐಸಿಸಿ ಉನ್ನತ ಮಟ್ಟದ ಕಾರ್ಯನಿರ್ವಾಹಕರೊಂದಿಗೆ ಮಾತುಕತೆ ನಡೆಸುತ್ತಿರುವುದರಿಂದ ಪ್ರಸ್ತುತ ಐಸಿಸಿ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಇದು ಇನ್ನೂ ಸೂಕ್ಷ್ಮವಾಗಿ ಉಳಿದಿದ್ದು, ಬಿಸಿಸಿಐ ಮತ್ತು ಭಾರತದ ಸರ್ಕಾರದ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ.

ಒಂದೇ ವೇಳೆ ಸ್ಥಳದ ಆಯ್ಕೆ ಕೊಟ್ಟರೆ  ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಹೆಚ್ಚಿನ ವಿಶ್ವಕಪ್ ಪಂದ್ಯಗಳನ್ನು ಪಾಕಿಸ್ತಾನ ಆಡಲು ಬಯಸಿದೆ. 2016 ರಲ್ಲಿ ಕೋಲ್ಕತ್ತಾದಲ್ಲಿ ಭಾರತದ ವಿರುದ್ಧ ಟಿ-20 ವಿಶ್ವಕಪ್ ಪಂದ್ಯವನ್ನು ಪಾಕ್  ಆಡಿತು ಮತ್ತು ಆಟಗಾರರು ಭದ್ರತೆಯ ಬಗ್ಗೆ ತುಂಬಾ ಸಂತೋಷಪಟ್ಟಿದ್ದರು. ಅದೇ ರೀತಿ, ಚೆನ್ನೈ ಕೂಡಾ ಪಾಕಿಸ್ತಾನಕ್ಕೆ ಸ್ಮರಣೀಯವಾಗಿ ಉಳಿದಿದೆ. ಇದು ನಿರ್ದಿಷ್ಟ ಸ್ಥಳಗಳಲ್ಲಿ ಸುರಕ್ಷಿತ ಭಾವನೆಯ ಬಗ್ಗೆಯೂ ಇದೆ ಎಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT