ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023)ರ 20ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ನಿಗದಿತ ಓವರ್ ನಲ್ಲಿ ಆರ್ ಸಿಬಿ 6 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ಗೆ ಗೆಲ್ಲಲು 175 ರನ್ ಗುರಿ ನೀಡಿದೆ.
ಆರ್ ಸಿಬಿ ಪರ ವಿರಾಟ್ ಕೊಹ್ಲಿ 50, ಫಾಫ್ ಡುಪ್ಲೆಸಿಸ್ 22, ಮಹಿಪಾಲ್ 26, ಗ್ಲೇನ್ ಮ್ಯಾಕ್ಸ್ 24 ಮತ್ತು ಶಹಬಾಜ್ ಅಹ್ಮದ್ ಅಜೇಯ 20 ರನ್ ಪೇರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ 4 ಪಂದ್ಯಗಳಲ್ಲಿ 4 ಸೋಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಡೇವಿಡ್ ವಾರ್ನರ್ ನೇತೃತ್ವದ ತಂಡ ತಮ್ಮ ಖಾತೆ ತೆರೆಯಲು ಬಯಸಿದೆ. ಆರ್‌ಸಿಬಿ ತಂಡ 3ರಲ್ಲಿ 1 ಪಂದ್ಯ ಗೆದ್ದು 7ನೇ ಸ್ಥಾನದಲ್ಲಿದೆ. ಫಾಫ್ ಡುಪ್ಲೆಸಿಸ್ ನೇತೃತ್ವದ ತಂಡ ಎರಡನೇ ಗೆಲುವು ದಾಖಲಿಸಲು ಬಯಸುತ್ತದೆ.