ಅರ್ಷದೀಪ್ ಸಿಂಗ್ ಮಾರಕ ಬೌಲಿಂಗ್ ದಾಳಿ 
ಕ್ರಿಕೆಟ್

ಅರ್ಷದೀಪ್ ಸಿಂಗ್ ಮಾರಕ ಬೌಲಿಂಗ್ ದಾಳಿಗೆ ತುಂಡಾದ 'ಮುಂಬೈ' ವಿಕೆಟ್; ಪಂಜಾಬ್ ಗೆ 13 ರನ್ ಗಳ ರೋಚಕ ಜಯಭೇರಿ

ಐಪಿಎಲ್ 2023 ಸರಣಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 13 ರನ್  ಗಳ ರೋಚಕ ಜಯ ದಾಖಲಿಸಿದೆ.

ಮುಂಬೈ: ಐಪಿಎಲ್ 2023 ಸರಣಿ ನಿರ್ಣಾಯಕ ಹಂತ ತಲುಪಿರುವಂತೆಯೇ ಇಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 13 ರನ್  ಗಳ ರೋಚಕ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿ ಪಂಜಾಬ್ ನೀಡಿದ್ದ 215 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಸೂರ್ಯ ಕುಮಾರ್ ಯಾದವ್ ಮತ್ತು ಕೆಮರಾನ್ ಗ್ರೀನ್ ರ ಅರ್ಧಶತಕಗಳ ಹೊರತಾಗಿಯೂ 6 ವಿಕೆಟ್ ಕಳೆದುಕೊಂಡು ಕೇವಲ 201 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 13 ರನ್ ಗಳ ಅಂತರದ ವಿರೋಚಿತ ಸೋಲು ಕಂಡಿತು. 

ನಾಯಕ ರೋಹಿತ್ ಶರ್ಮಾ 44, ಕ್ಯಾಮರೂನ್ ಗ್ರೀನ್ 67 ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ 57 ರನ್ , ಟಿಮ್ ಡೇವಿಡ್ ಔಟಾಗದೆ 25 ರನ್ ಗಳಿಸಿದರೂ ಗೆಲುವು ಕಾಣಲು ಸಾಧ್ಯವಾಗಲಿಲ್ಲ.

ಪಂಜಾಬ್ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್ ಸಿಂಗ್ 4 ವಿಕೆಟ್ ಕಿತ್ತು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕೊನೆಯ ರೋಚಕ ಓವರ್ ನಲ್ಲಿ ತಿಲಕ್ ವರ್ಮ ಮತ್ತು ನೆಹಾಲ್ ವಧೇರಾ ಅವರನ್ನು ಅರ್ಷದೀಪ್ ಸಿಂಗ್ ಕ್ಲೀನ್ ಬೌಲ್ಡ್ ಮಾಡಿದರು. ಎರಡೂ ಬಾರಿ ವಿಕೆಟ್ ಮುರಿದು ಹೋಯಿತು. ಬದಲಿಸಿ ಆಡಲಾಯಿತು.

ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ 8 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್ ಕಲೆ ಹಾಕಿತು. ಮ್ಯಾಥ್ಯೂ ಶಾರ್ಟ್11,ಪ್ರಭ್‌ಸಿಮ್ರಾನ್ 26,ಲಿವಿಂಗ್‌ಸ್ಟೋನ್ 10, ಅಥರ್ವ ಟೈಡೆ 29, ಹರ್‌ಪ್ರೀತ್ ಸಿಂಗ್ 41,ಸ್ಯಾಮ್ ಕುರ್ರನ್ 55, ಜಿತೇಶ್ ಶರ್ಮಾ25, ಹರ್‌ಪ್ರೀತ್ ಬ್ರಾರ್ 5 ರನ್ ಕೊಡುಗೆ ಸಲ್ಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

'Health camp' ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ಮಹಿಳೆ! ಪೊಲೀಸರಿಗೆ ದೂರು, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಸ್ ದಾಖಲು

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

ನನ್ನ ಜೊತೆ ಮರ್ಯಾದೆಯಿಂದ ಮಾತಾಡು: ಸ್ವಿಟ್ಜರ್ಲೆಂಡ್ ವಿರುದ್ಧದ ಪಂದ್ಯದ ನಡುವೆ ರೆಫರಿ ವಿರುದ್ಧ ಮೆಸ್ಸಿ ವಾಗ್ವಾದ, Video

ಅಸ್ಸಾಂ: ರೋಡ್ ರೋಲರ್ ಬಳಸಿ ಸೀಜ್ ಮಾಡಿದ್ದ 472 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ! Video