ಸಿಎಸ್ ಕೆ ಭರ್ಜರಿ ಬ್ಯಾಟಿಂಗ್ 
ಕ್ರಿಕೆಟ್

ಐಪಿಎಲ್ 2023: ಕೋಲ್ಕತಾ ವಿರುದ್ಧ ಚೆನ್ನೈ ಸಿಡಿಲಬ್ಬರದ ಬ್ಯಾಟಿಂಗ್: ಹಲವು ದಾಖಲೆ ಧೂಳಿಪಟ

16ನೇ ಆವೃತ್ತಿಯ ಐಪಿಎಲ್​​ನ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ರನ್ ಮಳೆಯನ್ನೇ ಹರಿಸಿದ್ದು, ಈ ಒಂದೇ ಒಂದು ಇನ್ನಿಂಗ್ಸ್ ನಿಂದ ಐಪಿಎಲ್ ಇತಿಹಾಸದ ಪುಟಗಳಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ.

ಕೋಲ್ಕತಾ: 16ನೇ ಆವೃತ್ತಿಯ ಐಪಿಎಲ್​​ನ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ನಲ್ಲಿ ರನ್ ಮಳೆಯನ್ನೇ ಹರಿಸಿದ್ದು, ಈ ಒಂದೇ ಒಂದು ಇನ್ನಿಂಗ್ಸ್ ನಿಂದ ಐಪಿಎಲ್ ಇತಿಹಾಸದ ಪುಟಗಳಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ.

ಬ್ಯಾಟ್ಸ್​​ಮನ್​ಗಳ ಸ್ವರ್ಗ ಎನಿಸಿರುವ ಕೋಲ್ಕತ್ತಾದ ಈಡನ್​​ ಗಾರ್ಡನ್ಸ್​​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಅಕ್ಷರಶಃ ಸ್ಪೋಟಿಸಿತು. ಒಂದೆಡೆ ಡೆವೋನ್​ ಕಾನ್ವೆ, ಶಿವಂ ದುಬೆ, ಅಜಿಂಕ್ಯ ರಹಾನೆ ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿದರೆ, ಮತ್ತೊಂದೆಡೆ ಕೋಲ್ಕತ್ತಾ ನೈಟ್​ ರೈಡರ್ಸ್ ವಿಕೆಟ್​​ ಕಬಳಿಸಲು ಪರದಾಡಿತು. ಪರಿಣಾಮ ಚೆನ್ನೈ ಬೃಹತ್​ ಮೊತ್ತ ಕಲೆ ಹಾಕಿತು. ಕೆಕೆಆರ್​ಗೆ 236 ರನ್​ಗಳ ಟಾರ್ಗೆಟ್​ ನೀಡಿದೆ.

ಇದೊಂದು ಭರ್ಜರಿ ಇನ್ನಿಂಗ್ಸ್ ಮೂಲಕ ಸಿಎಸ್ ಕೆ ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದೆ.

ಐಪಿಎಲ್ ಇತಿಹಾಸದ 3ನೇ ಗರಿಷ್ಠ ರನ್
ಇಂದು ಚೆನ್ನೈ ದಾಖಲಿಸಿದ 235 ರನ್ ಗಳ ಮೊತ್ತ ಐಪಿಎಲ್ ಇತಿಹಾಸದಲ್ಲಿ ಚೈನ್ನೈ ಪರ ದಾಖಲಾದ 3ನೇ ಗರಿಷ್ಠ ಮೊತ್ತವಾಗಿದೆ. 2010ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ತಂಡ 246ರನ್ ಕಲೆಹಾಕಿತ್ತು. ಇದಕ್ಕೂ ಮೊದಲು ಅಂದರೆ 2008ರಲ್ಲಿ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ಗಳಿಸಿದ್ದ 240 ರನ್ ಗಳು 2ನೇ ಸ್ಥಾನದಲ್ಲಿವೆ. ಇಂದಿನ ಮೊತ್ತ 3ನೇ ಸ್ಥಾನದಲ್ಲಿದೆ. ಗಮನಾರ್ಹ ಸಂಗತಿ ಎಂದರೆ ಈ ಎಲ್ಲ ಪಂದ್ಯಗಳಲ್ಲೂ ಎದುರಾಳಿ ತಂಡಗಳೂ ಕೂಡ 200ಕ್ಕೂ ಅಧಿಕ ಮೊತ್ತ ಕಲೆಹಾಕಿದ್ದವು.

Highest innings totals for CSK
246/5 vs RR, Chennai, 2010
240/5 vs PBKS, Mohali, 2008
235/4 vs KKR, Kolkata, today
226/6 vs RCB, Bengaluru, 2023
*Opposition teams have crossed 200 on each of the previous three occasions

ಐಪಿಎಲ್ ಇತಿಹಾಸದ ಗರಿಷ್ಠ ಸಿಕ್ಸರ್: ಸಿಎಸ್ ಕೆ 6ನೇ ಸ್ಥಾನ
ಇನ್ನು ಇಂದಿನ ಪಂದ್ಯದಲ್ಲಿ ಸಿಎಸ್ ಕೆ ಪರ ಒಟ್ಟು 18 ಸಿಕ್ಸ್ ಗಳು ಬಂದಿದ್ದು, ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸಿಕ್ಸರ್ ಗಳು ಬಂದ 6ನೇ ಪಂದ್ಯವಾಗಿದೆ.  2013ರಲ್ಲಿ ಆರ್ ಸಿಬಿ ತಂಡ ಪಂಜಾಬ್ ವಾರಿಯರ್ಸ್ ವಿರುದ್ಧ 21 ಸಿಕ್ಸರ್ ಗಳನ್ನು ಸಿಡಿಸಿತ್ತು. ಇದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Most sixes in an IPL innings
21 - RCB vs PWI, Bengaluru, 2013
20 - DC vs GL, Delhi, 2017
20 - RCB vs GL, Bengaluru, 2016
18 - RR vs PBKS, Sharjah, 2020
18 - RCB vs PBKS, Bangalore, 2015
18 - CSK vs KKR, Kolkata, today

ಟೂರ್ನಿಯ ಗರಿಷ್ಠ ಬ್ಯಾಟಿಂಗ್ ಸ್ಟ್ರೈಕ್
ಇನ್ನು ಹಾಲಿ ಐಪಿಎಲ್ ಟೂರ್ನಿಯ ಗರಿಷ್ಠ ಬ್ಯಾಟಿಂಗ್ ಸ್ಟ್ರೈಕ್ ವಿಭಾಗದಲ್ಲೂ ಇಂದಿನ ಪಂದ್ಯ ಅಗ್ರಸ್ಥಾನಕ್ಕೇರಿದ್ದು, ಇಂದು ಚೆನ್ನೈ ತಂಡ ಅಜಿಂಕ್ಯ ರಹಾನೆ 199.04 ಸರಾಸರಿಯಲ್ಲಿ ಬ್ಯಾಟ್ ಬೀಸಿ ಕೇವಲ 29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಿತ ಅಜೇಯ 71 ರನ್ ಗಳಿಸಿದ್ದಾರೆ.

Best batting strike-rates in IPL 2023 (min 100 runs):
199.04 - Ajinkya Rahane (CSK)
198.03 - Shardul Thakur (KKR)
188.80 - Glenn Maxwell (RCB)
185.86 - Nicholas Pooran (LSG)
168.49 - Suryakumar Yadav (MI)

ಸಿಎಸ್ ಕೆ ಪರ ವೇಗದ ಅರ್ಧಶತಕ
ಈ ಪಂದ್ಯದಲ್ಲಿ ಚೆನ್ನೈ ತಂಡದ ಶಿವಂ ದುಬೆ ಕೇವಲ 20 ಎಸೆತಗಳಲ್ಲಿ 50 ರನ್ ಚಚ್ಚಿದರು. ರಹಾನೆ ಜೊತೆಗೆ ಸಿಡಿದ ಶಿವಂ ದುಬೆ, ಕೆಕೆಆರ್ ಬೌಲರ್​ಗಳ ಬೆವರಿಳಿಸಿದರು. ಕೇವಲ 20 ಎಸೆತಗಳಲ್ಲಿ 50 ರನ್​ ಮುಟ್ಟಿದರು. ಅರ್ಧಶತಕದ ಬಳಿಕವೂ ದುಬೆ ಬ್ಯಾಟಿಂಗ್ ಅಬ್ಬರ ಮುಂದುವರೆಯಿತು. ಆದರೆ ಕುಲ್ವಂತ್ ಖೆಜ್ರೋಲಿಯಾ ಬೌಲಿಂಗ್​ನಲ್ಲಿ ಜೇಸನ್​ ರಾಯ್​ಗೆ ವಿಕೆಟ್ ಒಪ್ಪಿಸಿದರು. 

Fastest IPL fifties for CSK (by balls faced)
16 - Suresh Raina vs PBKS, Mumbai WS, 2014
19 - Moeen Ali vs RR, Mumbai WS, 2022
19 - Ajinkya Rahane vs MI, Mumbai WS, 2023
20 - MS Dhoni vs MI, Bengaluru, 2012
20 - Ambati Rayudu vs MI, Delhi, 2021
20 - Shivam Dube vs KKR, Kolkata, today

ಈಡನ್ ಗಾರ್ಡನ್ ನಲ್ಲಿ ಗರಿಷ್ಠ ಮೊತ್ತ
ಸಿಎಸ್​ಕೆ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಗಳಿಸಿದ 235 ರನ್​ ಗಳು ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಸ್ಕೋರ್​ ಇದಾಗಿದೆ. ಈ ಹಿಂದೆ ಕೋಲ್ಕತಾ ತಂಡ ಮುಂಬೈ ವಿರುದ್ಧ ಇದೇ ಮೈದಾನದಲ್ಲಿ ಗಳಿಸಿದ್ದ 232 ರನ್ ಈ ವರೆಗಿನ ಗರಿಷ್ಠ ಸ್ಕೋರ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT