ಕ್ರಿಕೆಟ್

ರನ್ ಸುರಿಮಳೆ: ಒಂದೇ ಪಂದ್ಯದಲ್ಲಿ 458 ರನ್, ಪಂಜಾಬ್ ವಿರುದ್ಧ ಲಕ್ನೋಗೆ 56 ರನ್ ಭರ್ಜರಿ ಜಯ, 2ನೇ ಸ್ಥಾನಕ್ಕೆ ಜಿಗಿತ

Srinivasamurthy VN

ಮೊಹಾಲಿ: ಐಪಿಎಲ್ ಟೂರ್ನಿಯಲ್ಲಿ ಇಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಪ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಸುರಿದಿದ್ದು, ಕೇವಲ 39.5 ಓವರ್ ನಲ್ಲಿ ಬರೊಬ್ಬರಿ 458 ರನ್ ಗಳು ಹರಿದು ಬಂದಿವೆ.

ಹೌದು.. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೊಸಿಯೇಶನ್ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ಇಂದು ನಡೆದ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ರನ್ ಮಳೆಯೇ ಹರಿದಿದೆ. ಅದರಲ್ಲೂ ಲಖನೌ ಸೂಪರ್ ಜೈಂಟ್ಸ್ ತಂಡ ಈ ಪಂದ್ಯದಲ್ಲಿ ದಾಖಲೆಯ ರನ್ ಪೇರಿಸಿದ್ದು ಐಪಿಎಲ್ ಇತಿಹಾಸದ 2ನೇ ಅತಿ ಹೆಚ್ಚು ರನ್‌ ಕಲೆ ಹಾಕಿತು. ಮಾತ್ರವಲ್ಲದೇ 56 ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

ಲಕ್ನೋ ಸೂಪರ್ ಜೈಂಟ್ಸ್ ತಂಡ ಬೃಹತ್ ಮೊತ್ತದ ಹೊರತಾಗಿಯೂ ಕೊನೆ ಓವರ್ ವರೆಗೂ ತನ್ನ ಪ್ರಯತ್ನ ಕೈ ಚೆಲ್ಲದ ಪಂಜಾಬ್ ಕಿಂಗ್ಸ್ ತಂಡ ಅಂತಿಮ ಹಂತದವರೆಗೂ ಹೋರಾಟ ನಡೆಸಿತು. ಅದರ ಪರಿಣಾಮವಾಗಿ ದಾಖಲೆಯ ಗುರಿ ಮುಂದಿದ್ದರೂ ಪಂಜಾಬ್ ಕಿಂಗ್ಸ್ ತಂಡ 19.5 ಓವರ್ ನಲ್ಲಿ 201 ರನ್‌ಗಳಿಸಿ 56 ರನ್ ಗಳ ಅಂತರದಲ್ಲಿ ಶರಣಾಯಿತು.

ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ಗೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾದ ಪ್ರಭಾಸಿಮ್ರಾನ್ ಸಿಂಗ್ (9)ಮತ್ತು ನಾಯಕ ಶಿಖರ್ ಧವನ್ (1) ಬೇಗನೇ ಔಟಾಗಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿತು. ಈ ಹಂತದಲ್ಲಿ ಬ್ಯಾಟಿಂಗ್ ಗೆ ಇಳಿದ ಅಥರ್ವ ಟೈಡೆ ಪಂಜಾಬ್ ಇನ್ನಿಂಗ್ಸ್ ಗೆ ಜೀವ ತುಂಬಿದರು.

ಕೇವಲ 36 ಎಸೆತಗಳನ್ನು ಎದುರಿಸಿದ ಟೈಡೆ 2 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 66 ರನ್ ಗಳಿಸಿ ಅಮೋಘ ಹೋರಾಟ ನಡೆಸಿದರು. ಅವರಿಗೆ ಸಿಕಂದರ್ ರಾಜಾ (36) ಲಯಾಮ್ ಲಿವಿಂಗ್ಸ್ಟನ್ (23) ಮತ್ತು ಜಿತೇಶ್ ಶರ್ಮಾ (24) ಉತ್ತಮ ಸಾಥ್ ನೀಡಿದರು.

ಆದರೆ ಗುರಿ ದೊಡ್ಡದಿದ್ದರಿಂದ ಗೆಲುವು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂಜಾಬ್ ತಂಡ 19.5 ಓವರ್ ನಲ್ಲಿ 201ರನ್ ಗಳಿ ಆಲೌಟ್ ಆಯಿತು. ಆ ಮೂಲಕ 56ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.

SCROLL FOR NEXT