ಕ್ರಿಕೆಟ್

3ನೇ ಏಕದಿನ ಪಂದ್ಯ: ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ಇಶಾನ್ ಕಿಶನ್

Srinivasamurthy VN

ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದ ಟೀಂ ಇಂಡಿಯಾ ಬ್ಯಾಟರ್ ಇಶಾನ್ ಕಿಶನ್ ಭಾರತದ ಕ್ರಿಕೆಟ್ ದಂತಕಥೆ ಎಂಎಸ್ ಧೋನಿ ಅವರ ದಾಖಲೆ ಸರಿಗಟ್ಟಿದ್ದಾರೆ.

ಈ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) 64 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್​ಗಳ ಸಹಾಯದಿಂದ 77 ರನ್ ಸಿಡಿಸಿದರು. ಆ ಮೂಲಕ ಸತತ 3ನೇ ಅರ್ಧಶತಕ ಸಿಡಿಸಿದ ಇಶಾನ್​, ಹೊಸ ದಾಖಲೆ ಬರೆದಿದ್ದು ಮಾತ್ರವಲ್ಲದೇ ಟೀಂ ಇಂಡಿಯಾ ಕಂಡ ಶ್ರೇಷ್ಟ ವಿಕೆಟ್ ಕೀಪರ್ ಬ್ಯಾಟರ್ ಧೋನಿ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ 6ನೇ ಆಟಗಾರ ಎನಿಸಿದ್ದಾರೆ. 

2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಧೋನಿ ಸತತ 3 ಅರ್ಧಶತಕ ಬಾರಿಸಿದ್ದರು. ಕ್ರಿಸ್ ಶ್ರೀಕಾಂತ್ (1982), ದಿಲೀಪ್ ವೆಂಗ್​ಸರ್ಕಾರ್ (1985), ಮೊಹಮ್ಮದ್ ಅಜರುದ್ದೀನ್ (1993), ಶ್ರೇಯಸ್ ಅಯ್ಯರ್ (2020) ಸತತ 3 ಅರ್ಧಶತಕ ಸಿಡಿಸಿದ್ದಾರೆ.
 

SCROLL FOR NEXT