ಜಯದೇವ್ ಉನಾದ್ಕತ್ 
ಕ್ರಿಕೆಟ್

3ನೇ ಏಕದಿನ ಪಂದ್ಯ: ಸುದೀರ್ಘ ಕಾಲದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್: ದಾಖಲೆ ಬರೆದ ಉನಾದ್ಕತ್

ವಿಂಡೀಸ್ ಪ್ರವಾಸದಲ್ಲಿ ವೇಗಿ ಉಮ್ರಾನ್ ಮಲಿಕ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಜಯದೇವ್ ಉನಾದ್ಕತ್ ತನ್ಮ ಕಮ್ ಬ್ಯಾಕ್ ಮೂಲಕವೇ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಟ್ರಿನಿಡಾಡ್: ವಿಂಡೀಸ್ ಪ್ರವಾಸದಲ್ಲಿ ವೇಗಿ ಉಮ್ರಾನ್ ಮಲಿಕ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಜಯದೇವ್ ಉನಾದ್ಕತ್ ತನ್ಮ ಕಮ್ ಬ್ಯಾಕ್ ಮೂಲಕವೇ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಹೌದು.. ಭಾರತದ ವೇಗಿ ಜಯದೇವ್ ಉನಾದ್ಕತ್ ಬರೊಬ್ಬರಿ 3,539 ದಿನಗಳ ಬಳಿಕ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದು ಆ ಮೂಲಕ 27 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. 2013ರ ಬಳಿಕ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ ಉನಾದ್ಕತ್, 2 ಏಕದಿನ ಪಂದ್ಯಗಳ ನಡುವೆ ಸುದೀರ್ಘ ಅಂತರ ಕಾಯ್ದುಕೊಂಡ ಭಾರತದ ಮೊದಲ ಆಟಗಾರನೆಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಉನಾದ್ಕತ್​ಗೂ ಮುನ್ನ ಭಾರತದ ಮಾಜಿ ಆಟಗಾರ ರಾಬಿನ್ ಸಿಂಗ್ (Robin Singh) 2 ಏಕದಿನ ಪಂದ್ಯಗಳ ನಡುವೆ 7 ವರ್ಷ, 230 ದಿನಗಳ ಅಂತರದೊಂದಿಗೆ ಈ ದಾಖಲೆ​ ಹೊಂದಿದ್ದರು. ಆದರೀಗ ಉನದ್ಕತ್​​, 9 ವರ್ಷ 210 ದಿನಗಳ ಬಳಿಕ ಏಕದಿನ ಪಂದ್ಯ ಆಡಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ಆಡಿದ 2 ಏಕದಿನ ಪಂದ್ಯಗಳ ನಡುವೆ 6 ವರ್ಷ, 160 ದಿನಗಳ ಅಂತರವಿದ್ದು, ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಏಪ್ರಿಲ್ 2003ರಲ್ಲಿ ಕೊನೆ ಏಕದಿನ ಪಂದ್ಯವನ್ನಾಡಿದ್ದ ಅಮಿತ್ ಮಿಶ್ರಾ, 2009ರಲ್ಲಿ ಮತ್ತೆ ಏಕದಿನದಲ್ಲಿ ಅವಕಾಶ ಪಡೆದಿದ್ದರು.

Most ODIs missed between two appearances for India
196 Sairaj Bahutule (1998-2003)
192 Jaydev Unadkat (2013-23) *
191 Parthiv Patel (2004-10)
180 Amit Mishra (2003-09)
162 Robin Uthappa (2008-14)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT