ಏಕದಿನ ವಿಶ್ವಕಪ್ 
ಕ್ರಿಕೆಟ್

ಭಾರತ-ಪಾಕಿಸ್ತಾನ ಮತ್ತು ಇತರ ಎಂಟು ವಿಶ್ವಕಪ್ ಪಂದ್ಯಗಳ ದಿನಾಂಕ ಬದಲಾವಣೆ, ಇಲ್ಲಿದೆ ವಿವರ!

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2023ರ ODI ವಿಶ್ವಕಪ್‌ನ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2023ರ ODI ವಿಶ್ವಕಪ್‌ನ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಇದರಲ್ಲಿ ಭಾರತ-ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಹೊರತುಪಡಿಸಿ ಉಳಿದ 8 ಪಂದ್ಯಗಳ ದಿನಾಂಕವೂ ಬದಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಭಾನುವಾರ, 15 ಅಕ್ಟೋಬರ್ 2023ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿತ್ತು. ಈಗ ಅದನ್ನು ಒಂದು ದಿನ ಮುಂಚಿತವಾಗಿ ಸ್ಥಳಾಂತರಿಸಲಾಗಿದೆ. ಪಂದ್ಯವು ಈಗ ಅದೇ ಸ್ಥಳದಲ್ಲಿ ಶನಿವಾರ, 14 ಅಕ್ಟೋಬರ್ 2023ರಂದು ನಡೆಯಲಿದೆ.

ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್‌ನ ಪಂದ್ಯವನ್ನು ಈಗ 24 ಗಂಟೆಗಳ ನಂತರ ಅಂದರೆ ಅಕ್ಟೋಬರ್ 14ರ ಶನಿವಾರದ ಬದಲಿಗೆ 15 ಅಕ್ಟೋಬರ್ 2023ರ ಭಾನುವಾರದಂದು ನಡೆಯಲಿದೆ. ಅಕ್ಟೋಬರ್ 12 ರಂದು ಗುರುವಾರ ನಡೆಯಲಿರುವ ಹೈದರಾಬಾದ್‌ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಈಗ ಅಕ್ಟೋಬರ್ 10 ಮಂಗಳವಾರ ನಡೆಯಲಿದೆ. 13 ಅಕ್ಟೋಬರ್ 2023ರಂದು ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಶ್ರೇಷ್ಠ ಪಂದ್ಯವನ್ನು ಈಗ 24 ಗಂಟೆಗಳ ಮೊದಲು 12 ಅಕ್ಟೋಬರ್ 2023ರಂದು ನಡೆಸಲಾಗುತ್ತದೆ.

ಬಾಂಗ್ಲಾದೇಶ-ನ್ಯೂಜಿಲೆಂಡ್ ಪಂದ್ಯಗಳ ವೇಳಾಪಟ್ಟಿ ಬದಲಾವಣೆ
ಅದೇ ರೀತಿ ಅಕ್ಟೋಬರ್ 14ರಂದು ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ ಪಂದ್ಯ ನಡೆಯಬೇಕಿತ್ತು. ಆದರೆ ಈಗ ಒಂದು ದಿನ ಮುಂಚಿತವಾಗಿ ಮರು ನಿಗದಿಪಡಿಸಲಾಗಿದೆ. ಈಗ ಈ ಪಂದ್ಯವು ಶುಕ್ರವಾರ 13 ಅಕ್ಟೋಬರ್ 2023ರಂದು ನಡೆಯಲಿದೆ. ಟೂರ್ನಿಯ ಆರಂಭಿಕ ಹಂತದ ವೇಳಾಪಟ್ಟಿಯಲ್ಲಿಯೇ ಸಣ್ಣ ಬದಲಾವಣೆ ಮಾಡಲಾಗಿದೆ. ಧರ್ಮಶಾಲಾದಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವು ಈಗ ಹಗಲು-ರಾತ್ರಿಯ ಬದಲು ಹಗಲು ಪಂದ್ಯವಾಗಿ ಮಾರ್ಪಟ್ಟಿದೆ. ಈಗ ಈ ಪಂದ್ಯ ಬೆಳಗ್ಗೆ 10:30ಕ್ಕೆ(ಸ್ಥಳೀಯ ಕಾಲಮಾನ) ಆರಂಭವಾಗಲಿದೆ.

ನವೆಂಬರ್ 12ರಂದು ಭಾರತದ ಪಂದ್ಯ
ಲೀಗ್ ಹಂತದ ಕೊನೆಯಲ್ಲಿ ನವೆಂಬರ್ 12 (ಭಾನುವಾರ) ಡಬಲ್ ಹೆಡರ್ ವೇಳಾಪಟ್ಟಿ ಬದಲಾಗಿದೆ. ಈ ದಿನ ನಡೆಯಬೇಕಿದ್ದ ಪಂದ್ಯಗಳನ್ನು ಒಂದು ದಿನ ಮುಂಚಿತವಾಗಿ ನವೆಂಬರ್ 11ಕ್ಕೆ (ಶನಿವಾರ) ಸ್ಥಳಾಂತರಿಸಲಾಗಿದೆ. ಪುಣೆ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ (10:30 AM) ಮತ್ತು ಕೋಲ್ಕತ್ತಾ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ (02:00 PM) ಎದುರಿಸಲಿದೆ. ನೆದರ್ಲೆಂಡ್ಸ್ ವಿರುದ್ಧದ ಭಾರತದ ಕೊನೆಯ ಲೀಗ್ ಪಂದ್ಯವು ಈಗ ಬೆಂಗಳೂರಿನಲ್ಲಿ ನವೆಂಬರ್ 11ರ ಬದಲಿಗೆ 12ರಂದು ಹಗಲು-ರಾತ್ರಿ ಪಂದ್ಯವಾಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT