ಕ್ರಿಕೆಟ್

ಐಪಿಎಲ್ 2024: ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ಮುಂದುವರಿಕೆ!

Nagaraja AB

ಮುಂಬೈ: ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಆವೃತ್ತಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಕೆಆರ್ ಸಿಇಒ ವೆಂಕಿ ಮೈಸೂರು, ಶ್ರೇಯಸ್ಸ್ ಅಯ್ಯರ್ ಕೆಕೆಆರ್ ನಾಯಕರಾಗಿ ಮುಂದುವರೆಯಲಿದ್ದು, ಸೌತ್‌ಪಾವ್ ನಿತೀಶ್ ರಾಣಾ ಅವರ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. 

ಗಾಯದ ಸಮಸ್ಯೆಯಿಂದ 2023ರ ಐಪಿಎಲ್ ಆವೃತ್ತಿಯಿಂದ ಶ್ರೇಯಸ್ಸ್ ಅಯ್ಯರ್ ದೂರ ಉಳಿದದ್ದು ನಿಜಕ್ಕೂ ದುರಾದೃಷ್ಟಕರ. ಅವರು ನಾಯಕನಾಗಿ ಹಿಂತಿರುಗಿರುವುದು ನಮಗೆ ಸಂತೋಷ ತಂದಿದೆ. ಅವರು ಗಾಯದಿಂದ ಚೇತರಿಸಿಕೊಳ್ಳಲು ಶ್ರಮಿಸಿದ ರೀತಿ ಮತ್ತು ವಿಶ್ವಕಪ್ ಟೂರ್ನಿಯಲ್ಲಿ ಪ್ರದರ್ಶಿಸಿದ ಫಾರ್ಮ್ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಮುಂದಿನ ಆವೃತ್ತಿಯಲ್ಲಿ ನಿತೀಶ್ ಉಪನಾಯಕನಾಗಿ ತಂಡಕ್ಕಾಗಿ ಶ್ರೇಯಸ್ ಅಯ್ಯರ್ ಅವರನ್ನು ಬೆಂಬಲಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ. 

ಇನ್ನೂ ಶ್ರೇಯಸ್ ಅಯ್ಯರ್ ಮಾತನಾಡಿ, ಕಳೆದ ಆವೃತ್ತಿಯಲ್ಲಿ ಗಾಯದ ಕಾರಣ ನನ್ನ ಅನುಪಸ್ಥಿತಿ ಸೇರಿದಂತೆ ಹಲವಾರು ಸವಾಲುಗಳನ್ನು  ತಂಡ ಎದುರಿಸಿದೆ. ನಿತೀಶ್  ನನ್ನ ಜಾಗ ತುಂಬಿರುವುದಲ್ಲದೇ, ಅವರ ಶ್ಲಾಘನೀಯ ನಾಯಕತ್ವದಿಂದಲೂ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಯ್ಯರ್ ಒಟ್ಟು 51 ಪಂದ್ಯ,  47 ಇನ್ನಿಂಗ್ಸ್‌ ಗಳಲ್ಲಿ 30.66 ಸರಾಸರಿಯಲ್ಲಿ 1,104 ರನ್‌ಗಳನ್ನು ಗಳಿಸಿದ್ದಾರೆ. ಎಂಟು ಅರ್ಧ ಶತಕ ಗಳಿಸಿದ್ದು, 74 ಅವರ ಅತ್ಯುತ್ತಮ ಸ್ಕೋರ್‌ ಆಗಿದೆ. 

SCROLL FOR NEXT