ಎಂಎಸ್ ಧೋನಿ-ಕೆಎಲ್ ರಾಹುಲ್ 
ಕ್ರಿಕೆಟ್

ಸತತ 10 ODI ಪಂದ್ಯಗಳ ಗೆಲುವು: ನಾಯಕತ್ವದಲ್ಲಿ MS ಧೋನಿ ದಾಖಲೆ ಹಿಂದಿಕ್ಕಿದ ಕೆಎಲ್ ರಾಹುಲ್!

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ KL ರಾಹುಲ್ ಅವರು ನಾಯಕತ್ವದ ದಾಖಲೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ KL ರಾಹುಲ್ ಅವರು ನಾಯಕತ್ವದ ದಾಖಲೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಇಂದು ನಡೆದ ಆರಂಭಿಕ ಏಕದಿನ ಪಂದ್ಯದಲ್ಲಿ ಹಂಗಾಮಿ ಏಕದಿನ ನಾಯಕ ರಾಹುಲ್ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‌ಗಳಿಂದ ಮಣಿಸಿ ಮೆನ್ ಇನ್ ಬ್ಲೂ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್‌ಗೆ ಏಕದಿನ ನಾಯಕತ್ವವನ್ನು ಹಸ್ತಾಂತರಿಸಲಾಗಿತ್ತು. ಈ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 2 ವಿಕೆಟ್ ಗಳಿಂದ ಮಣಿಸಿದ್ದು, ನಾಯಕತ್ವದ ದೊಡ್ಡ ದಾಖಲೆಯಲ್ಲಿ ರಾಹುಲ್ ಶ್ರೇಷ್ಠ ಐಕಾನ್ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ ರಾಹುಲ್ ಮಾಜಿ ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ODI ಗೆಲುವು ಎಲ್ಲಾ ಸ್ವರೂಪಗಳಲ್ಲಿ ರಾಹುಲ್ ಅವರ ಸತತ 10ನೇ ಜಯವಾಗಿದೆ. ಇದು ಈಗ ಮಾಜಿ ನಾಯಕ ಧೋನಿಗಿಂತಲೂ ಹೆಚ್ಚು. ಕನ್ನಡಿಗ ಕೆಎಲ್ ರಾಹುಲ್ 2022/23ರಲ್ಲಿ ಕೊನೆಯ 10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಜೇಯರಾಗಿದ್ದಾರೆ. ಆದರೆ ಧೋನಿ 2013ರಲ್ಲಿ ಭಾರತವನ್ನು 9 ಪಂದ್ಯಗಳ ಅಜೇಯ ಓಟವನ್ನು ಮುನ್ನಡೆಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ನಾಯಕರಿಂದ ಸತತ ಅತಿ ಹೆಚ್ಚು ಗೆಲುವುಗಳು:

* ರೋಹಿತ್ ಶರ್ಮಾ - 19 ಪಂದ್ಯಗಳು (2019/22)

* ರೋಹಿತ್ ಶರ್ಮಾ - 12 ಪಂದ್ಯಗಳು (2018)

* ವಿರಾಟ್ ಕೊಹ್ಲಿ - 12 ಪಂದ್ಯಗಳು (2017)

* ರೋಹಿತ್ ಶರ್ಮಾ - 10 ಪಂದ್ಯಗಳು (2023)

* ಕೆಎಲ್ ರಾಹುಲ್ – 10 ಪಂದ್ಯಗಳು (2022/23)*

* ಎಂಎಸ್ ಧೋನಿ - 9 ಗೆಲುವುಗಳು (2013)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT