ಪೃಥ್ವಿ ಶಾ 
ಕ್ರಿಕೆಟ್

ಸೆಲ್ಫಿಗೆ ನಿರಾಕರಣೆ, ಕ್ರಿಕೆಟ್ ಆಟಗಾರ ಪೃಥ್ವಿ ಶಾ ಸ್ನೇಹಿತನ ಕಾರಿನ ಮೇಲೆ ದಾಳಿ

ವಾಣಿಜ್ಯ ನಗರಿ ಮುಂಬೈಯಲ್ಲಿ ಫೈವ್ ಸ್ಟಾರ್ ಹೋಟೆಲ್ ವೊಂದರ ಮುಂಭಾಗ ಸೆಲ್ಫಿಗೆ ನಿರಾಕರಿಸಿದ ನಂತರ ಜನರ ಗುಂಪೊಂದು ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಎಂಟು ಜನರ ವಿರುದ್ಧ ವಾಯವ್ಯ ಮುಂಬೈನ ಓಶಿವಾರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಫೈವ್ ಸ್ಟಾರ್ ಹೋಟೆಲ್ ವೊಂದರ ಮುಂಭಾಗ ಸೆಲ್ಫಿಗೆ ನಿರಾಕರಿಸಿದ ನಂತರ ಜನರ ಗುಂಪೊಂದು ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರ ಸ್ನೇಹಿತನ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಎಂಟು ಜನರ ವಿರುದ್ಧ ವಾಯವ್ಯ ಮುಂಬೈನ ಓಶಿವಾರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಆರೋಪಿಗಳು ಕಾರನ್ನು ಹಿಂಬಾಲಿಸಿ ಹಣ ನೀಡದಿದ್ದರೆ ಸುಳ್ಳು ಪ್ರಕರಣದ ಬೆದರಿಕೆ ಹಾಕಿರುವುದಾಗಿ ಶಾ ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಪೃಥ್ವಿ ಶಾ ವಾಯುವ್ಯ ಮುಂಬೈನ ಸಾಂತಾ ಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಹೋಗಿದ್ದಾಗ ಅಪರಿಚಿತರು ಸೆಲ್ಫಿಗೆ ಒತ್ತಾಯಿಸಿದ್ದಾರೆ.

ಇಬ್ಬರು ವ್ಯಕ್ತಿಗಳು ಸೆಲ್ಫಿಗೆ ಪೃಥ್ವಿ ಶಾ ಅವರನ್ನು ಒತ್ತಾಯಿಸಿದ್ದಾರೆ. ಆದರೆ, ಇದೇ ಗುಂಪು ಮತ್ತೆ ಬಂದಿದ್ದು, ಇತರ ಆರೋಪಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಕೇಳಿದ್ದಾರೆ. ಈ ವೇಳೆ ಶಾ ನಿರಾಕರಿಸಿದಾಗ, ಶಾ ಅವರ ಸ್ನೇಹಿತ ರೆಸ್ಟೋರೆಂಟ್ ಮ್ಯಾನೇಜರ್ ಗೆ ಕರೆ ಮಾಡಿ, ದೂರು ನೀಡಿದ್ದಾರೆ. ಆರೋಪಿಗಳನ್ನು ಹೊಟೇಲ್‌ನಿಂದ ಹೊರಹೋಗುವಂತೆ ವ್ಯವಸ್ಥಾಪಕರು ಹೇಳಿದ್ದಾರೆ.

ಈ ಘಟನೆಯಿಂದ ಕೆರಳಿದ ವ್ಯಕ್ತಿಗಳು ಹೋಟೆಲ್ ಹೊರಗಡೆ ಬೇಸ್ ಬಾಲ್ ಬ್ಯಾಟ್ ಗಳಿಂದ ಶಾ ಅವರ ಸ್ನೇಹಿತನ ಕಾರನ್ನು ಧ್ವಂಸಗೊಳಿಸಿದ್ದು, ಹಿಂಭಾಗದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಘಟನೆ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384, 143, 148, 149, 427, 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾ ವೆಚ್ಚದಲ್ಲಿ ದಾಖಲೆ ಹೆಚ್ಚಳ!

Union Budget 2026: 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ - ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್ 2026: ಯುವ ಜನತೆಗೆ ಅವಕಾಶಗಳ ಹೆಬ್ಬಾಗಿಲು- ಪ್ರಧಾನಿ ನರೇಂದ್ರ ಮೋದಿ

Union Budget 2026: 'ಕರ್ತವ್ಯ ಮಂತ್ರ' ಪಠಿಸಿದ ನಿರ್ಮಲಾ; ಹೂಡಿಕೆ, ಉದ್ಯೋಗ, ಉತ್ಪಾದನೆಗೆ ಒತ್ತು

Union Budget 2026: ನಾರಿ ಶಕ್ತಿ, ರೈತರು, ಕೃಷಿಯಲ್ಲಿ ಮೀನುಗಾರಿಕೆ, AIಗೆ ಆದ್ಯತೆ

SCROLL FOR NEXT