ವಿದೇಶದತ್ತ ಮುಖ ಮಾಡಿದ ಟೀಂ ಇಂಡಿಯಾ ಓಪನರ್ 
ಕ್ರಿಕೆಟ್

ಭಾರತದಲ್ಲಿ 30+ ಆಟಗಾರರನ್ನು 80ರ ಮುದುಕರಂತೆ ನೋಡುತ್ತಾರೆ: ಬಿಸಿಸಿಐಗೆ ಗುಡ್ ಬೈ ಹೇಳಿ, ವಿದೇಶದತ್ತ ಮುಖ ಮಾಡಿದ ಟೀಂ ಇಂಡಿಯಾ ಓಪನರ್!

ಬಿಸಿಸಿಐ ಕ್ರಿಕೆಟ್ ಜಗತ್ತಿನ ಅನಭಿಶಕ್ತ ದೊರೆ... ಜಾಗತಿಕ ಕ್ರಿಕೆಟ್ ನ ಶ್ರೀಮಂತ ಬೋರ್ಡ್..ಇಂತಹ ದೊಡ್ಡ ಬೋರ್ಡ್ ತೊರೆಯಲು ಮುಂದಾಗಿರುವ ಟೀಂ ಇಂಡಿಯಾ ಓಪನರ್ ಇದೀಗ ವಿದೇಶಿ ತಂಡಗಳತ್ತ ಮುಖ ಮಾಡಿದ್ದಾರೆ.

ಚೆನ್ನೈ: ಬಿಸಿಸಿಐ ಕ್ರಿಕೆಟ್ ಜಗತ್ತಿನ ಅನಭಿಶಕ್ತ ದೊರೆ... ಜಾಗತಿಕ ಕ್ರಿಕೆಟ್ ನ ಶ್ರೀಮಂತ ಬೋರ್ಡ್..ಇಂತಹ ದೊಡ್ಡ ಬೋರ್ಡ್ ತೊರೆಯಲು ಮುಂದಾಗಿರುವ ಟೀಂ ಇಂಡಿಯಾ ಓಪನರ್ ಇದೀಗ ವಿದೇಶಿ ತಂಡಗಳತ್ತ ಮುಖ ಮಾಡಿದ್ದಾರೆ.

ಹೌದು... ಭಾರತೀಯ ಕ್ರಿಕೆಟ್‌ನಲ್ಲಿ ಎಲ್ಲಾ ಕಥೆಗಳು ಸುಖಾಂತ್ಯವನ್ನು ಹೊಂದಿರುವುದಿಲ್ಲ....ಅದೆಷ್ಟೋ ಪ್ರತಿಭಾನ್ವಿತ ಕ್ರಿಕೆಟಿಗರು ಅವಕಾಶವಂಚಿತರಾಗಿ ತಮ್ಮ ವೃತ್ತಿ ಜೀವನ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ವಿದೇಶಿ ತಂಡಗಳಲ್ಲಿ ಆಡುವ ಮೂಲಕ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ. ಈ ಪಟ್ಟಿಗೆ ಇದೀಗ ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಬ್ಯಾಟ್ಸ್ ಮನ್ ಸೇರ್ಪಡೆಯಾಗಿದ್ದು, ಭಾರತದ ಪರ 61 ಟೆಸ್ಟ್ ಮತ್ತು 17 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿರುವ ಅನುಭವಿ ಆರಂಭಿಕ ಆಟಗಾರ ಮುರಳಿ ವಿಜಯ್ ಇದೀಗ ಬಿಸಿಸಿಐ ತೊರೆಯಲು ಮುಂದಾಗಿದ್ದಾರೆ.

2018ರಲ್ಲಿ  ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯಬಾರಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಮುರುಳಿ ವಿಜಯ್ ಬಳಿಕ ತಮಿಳುನಾಡು ಕ್ರಿಕೆಟ್ ಲೀಗ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ತಂಡದಲ್ಲಿ ಅವಕಾಶ ಸಿಗದೇ ಇರುವ ಕಾರಣ ಅವರು ವಿದೇಶಿ ತಂಡಗಳತ್ತ ಮುಖ ಮಾಡಿದ್ದಾರೆ. ಭಾರತದ ಪರ 61 ಟೆಸ್ಟ್ (3982 ರನ್), 17 ODI (339 ರನ್), ಒಂಬತ್ತು T20I (169 ರನ್) ಆಡಿರುವ ಅನುಭವಿ ಆರಂಭಿಕ ಆಟಗಾರ ಮುರಳಿ ವಿಜಯ್ ಭಾರತದಲ್ಲಿ ನನ್ನ ಕ್ರಿಕೆಟ್‌ ಅಧ್ಯಾಯ "ಬಹುತೇಕ ಮುಗಿದಿದೆ" ಮತ್ತು ಆಟವನ್ನು ಮುಂದುವರಿಸಲು ವಿದೇಶಕ್ಕೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. 

ಈ ಕುರಿತು ವೆಡ್ನೆಸ್ ಡೇ ವಿತ್ ರಾಮನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಮುರಳಿ ವಿಜಯ್, 'ಭಾರತೀಯ ಕ್ರಿಕೆಟ್‌ನಲ್ಲಿ ಅವಕಾಶ ಪಡೆಯಲು ನನ್ನ ವಯಸ್ಸು ಅಡ್ಡಿಯಾಗುತ್ತಿದೆ.. ನಾನು BCCI ಜೊತೆಗಿನ ನನ್ನ ವ್ಯವಹಾರವನ್ನು ಬಹುತೇಕ ಮುಗಿಸಿದ್ದೇನೆ ಮತ್ತು ನಾನು ವಿದೇಶದಲ್ಲಿ ನನ್ನ ಮಾರ್ಗಗಳನ್ನು ಕಂಡುಕೊಳ್ಳಲು ಬಯಸುತ್ತೇನೆ. ಸ್ವಲ್ಪ ಸ್ಪರ್ಧಾತ್ಮಕ ಕ್ರಿಕೆಟ್ ಅನ್ನು ಆಡಲ ಬಯಸುತ್ತೇನೆ ಎಂದು ಹೇಳಿದ್ದಾರೆ.

ಭಾರತದಲ್ಲಿ 30 ಪ್ಲಸ್ ಆಟಗಾರರನ್ನು 80 ವರ್ಷದ ಮುದುಕರಂತೆ ನೋಡುತ್ತಾರೆ. ನಾನು ಯಾವುದೇ ವಿವಾದಕ್ಕೆ ಸಿಲುಕಲು ಬಯಸುವುದಿಲ್ಲ. ಮಾಧ್ಯಮಗಳು ಅದನ್ನು ವಿಭಿನ್ನವಾಗಿ ಹೇಳಬೇಕು. ನಿಮ್ಮ 30ರ ಹರೆಯದಲ್ಲಿ. ಇದೀಗ ಇಲ್ಲಿ ಕುಳಿತು, ನಾನು ಈಗ ಬ್ಯಾಟಿಂಗ್ ಮಾಡುವ ರೀತಿಯಲ್ಲಿಯೇ ಬ್ಯಾಟ್ ಮಾಡಬಲ್ಲೆ. ಆದರೆ ದುರದೃಷ್ಟವಶಾತ್ ಅಥವಾ ಅದೃಷ್ಟವಶಾತ್, ಅವಕಾಶಗಳು ಕಡಿಮೆಯಾಗಿವೆ.. ಹೀಗಾಗಿ ನಾನು ಹೊರಗೆ ನನ್ನ ಅವಕಾಶಗಳನ್ನು ಹುಡುಕಬೇಕಾಗಿದೆ. ಬಹುಶಃ ವೀರೇಂದ್ರ ಸೆಹ್ವಾಗ್ ಅವರಂತೆ ನನಗೆ ಬೆಂಬಲ ಸಿಕ್ಕಿದ್ದರೆ, ವಿಷಯಗಳು ವಿಭಿನ್ನವಾಗಿರಬಹುದು ಎಂದು ಮುರಳಿ ವಿಜಯ್ ಹೇಳಿದ್ದಾರೆ.

2020 ರಲ್ಲಿ, ಮುರಳಿ ವಿಜಯ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗೆ, ಅವರು ಹವ್ಯಾಸಿ ಗಾಲ್ಫ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಚೆನ್ನೈ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT