ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧ ಮೊದಲ ODI: ಭಾರತದ ಪರ ಮತ್ತೊಂದು ಶತಕ, ಒಂದೇ ಪಂದ್ಯದಲ್ಲಿ 6 ಮಂದಿ ಕ್ರಿಕೆಟ್ ದೈತ್ಯರ ದಾಖಲೆ ಮುರಿದ ಶುಭ್ ಮನ್ ಗಿಲ್

Srinivasamurthy VN

ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಮತ್ತೊಂದು ಶತಕ ಸಿಡಿಸಿರುವ ಶುಭ್ ಮನ್ ಗಿಲ್ ಒಂದೇ ಪಂದ್ಯದಲ್ಲಿ ಕ್ರಿಕೆಟ್ ಜಗತ್ತಿನ 6 ದೈತ್ಯ ಕ್ರಿಕೆಟಿಗರ ದಾಖಲೆ ಹಿಂದಿಕ್ಕಿದ್ದಾರೆ.

ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಶುಭ್ ಮನ್ ಗಿಲ್ 87 ಎಸೆತಗಳಲ್ಲಿ ಶತಕ ಸಡಿಸಿದ್ದು, ಇದು ಅವರ ವೃತ್ತಿ ಜೀವನದ 3ನೇ ಏಕದಿನ ಶತಕವಾಗಿದೆ. ಇದೇ ಪಂದ್ಯದಲ್ಲಿ ಗಿಲ್ ಮತ್ತೊಂದು ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ನಲ್ಲಿ ಸಾವಿರ ರನ್ ಪೂರೈಸಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಗಿಲ್ ಕೇವಲ 19 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದು, ಆ ಮೂಲಕ ಕ್ರಿಕೆಟ್ ದಂತಕಥೆಗಳಾದ ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ಸ್, ಇಂಗ್ಲೆಂಡ್ ಕೆವಿನ್ ಪೀಟರ್ಸೆನ್, ಜೋನಾಥನ್ ಟ್ರಾಟ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಮತ್ತು ರಸ್ಸಿ ದೆಸ್ಸೆನ್ ಅವರನ್ನು ಹಿಂದಿಕ್ಕಿದ್ದಾರೆ.

ಈ ಎಲ್ಲ ದೈತ್ಯರು ತಮ್ಮ ಮೊದಲ ಸಾವಿರ ರನ್ ಪೂರೈಕೆಗಾಗಿ 21 ಇನ್ನಿಂಗ್ಸ್ ಗಳನ್ನು ತಗೆದುಕೊಂಡಿದ್ದರೆ, ಗಿಲ್ ಕೇವಲ 19 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿದ್ದಾರೆ. ಇಷ್ಟೇ ಇನ್ನಿಂಗ್ಸ್ ನಲ್ಲಿ ಪಾಕಿಸ್ತಾನದ ಇಮಾನ್ ಉಲ್ ಹಕ್ ಕೂಡ ಸಾವಿರ ಪೂರೈಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗದ ಸಾವಿರ ಪೂರೈಕೆ ಪಾಕಿಸ್ತಾನದ ಫಖರ್ ಜಮಾನ್ ಹೆಸರಿಲ್ಲಿದ್ದು, ಅವರು 18 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿದ್ದಾರೆ.

ಇನ್ನು ಭಾರತದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ತಲಾ 24 ಇನ್ನಿಂಗ್ಸ್ ಗಳಲ್ಲಿ ತಮ್ಮ ಮೊದಲ ಸಾವಿರ ರನ್ ಪೂರೈಸಿದ್ದರು.

STAT: Fewest innings to 1000 ODI runs
18 Fakhar Zaman
19 Imam-ul-Haq/ Shubman Gill
21 Viv Richards/ Kevin Pietersen/ Jonathan Trott/ Quinton de Kock/ Babar Azam/ Rassie vd Dussen

SCROLL FOR NEXT