ಕ್ರಿಕೆಟ್

ಗಿಲ್, ರೋ'ಹಿಟ್'' ಶತಕ, ಪಾಂಡ್ಯಾ ಸ್ಫೋಟಕ ಬ್ಯಾಟಿಂಗ್: ನ್ಯೂಜಿಲೆಂಡ್ ಗೆ ಗೆಲ್ಲಲು 386 ರನ್ ಗಳ ಬೃಹತ್ ಗುರಿ

Srinivasamurthy VN

ಇಂದೋರ್: ಆರಂಭಿಕರಾದ ಶುಭ್ ಮನ್ ಗಿಲ್, ರೋಹಿತ್ ಶರ್ಮಾ ಶತಕ ಮತ್ತು ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ನ್ಯೂಜಿಲೆಂಡ್ ಗೆಲ್ಲಲು 386 ರನ್ ಗಳ ಬೃಹತ್ ಗುರಿ ನೀಡಿದೆ.

ಇಂದೋರ್ ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದ್ದು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ರೋಹಿತ್ ಶರ್ಮಾ (101 ರನ್), ಶುಭ್ ಮನ್ ಗಿಲ್ (112 ರನ್) ರ ಶತಕ ಮತ್ತು ಹಾರ್ದಿಕ್  ಪಾಂಡ್ಯಾ (64 ರನ್) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿದೆ. ಆ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 386 ರನ್ ಗಳ ಬೃಹತ್ ಗುರಿ ನೀಡಿದೆ. 

ಭಾರತದ ಪರ ಕೊಹ್ಲಿ 36 ರನ್ ಮತ್ತು ಶಾರ್ದೂಲ್ ಠಾಕೂರ್ 26 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡಿದರು. ಕಿವೀಸ್ ಎಲ್ಲ ಬೌಲರ್ ಗಳು ದುಬಾರಿಯಾದರೂ ಅಂತಿಮ ಹಂತಗಲ್ಲಿ ನಿಗದಿತವಾಗಿ ವಿಕೆಟ್ ಪಡೆಯುವ ಮೂಲಕ ಭಾರತ ರನ್ ವೇಗಕ್ಕೆ ತಡೆ ಹಾಕಿದರು. ಜೇಕಬ್ ಡಫ್ಫಿ 3, ಬ್ಲೇರ್ ಟಿಕ್ನರ್ 3 ವಿಕೆಟ್ ಪಡೆದರೆ, ಬ್ರೇಸ್ ವೆಲ್ 1 ವಿಕೆಟ್ ಪಡೆದರು.
 

SCROLL FOR NEXT