ಕ್ರಿಕೆಟ್

ಕಡಿಮೆ ಇನ್ನಿಂಗ್ಸ್ ನಲ್ಲಿ ನಾಲ್ಕು ಶತಕ, ಧವನ್ ಹಿಂದಿಕ್ಕಿದ ಯುವ ಆಟಗಾರ ಗಿಲ್

Srinivasamurthy VN

ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ಯುವ ಆಟಗಾರ ಶುಭ್ ಮನ್ ಗಿಲ್ ಮತ್ತೊಂದು ದಾಖಲೆ ನಿರ್ಮಿಸಿದ್ದು, ಭಾರತದ ಸ್ಫೋಟಕ ಬ್ಯಾಟರ್ ಶಿಖರ್ ಧವನ್ ದಾಖಲೆ ಹಿಂದಿಕ್ಕಿದ್ದಾರೆ.

ಇಂದೋರ್ ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗಿಲ್ 78 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ 112 ರನ್ ಚಚ್ಚಿದರು. ಈ ಮೂಲಕ ಗಿಲ್ ಕಡಿಮೆ ಇನ್ನಿಂಗ್ಸ್ ಗಳಲ್ಲಿ 4 ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನಕೇರಿದ್ದಾರೆ. ಅಲ್ಲದೆ ಇದೇ ಸಾಧನೆ ಮಾಡಿದ್ದ ಶಿಖರ್ ಧವನ್ ರನ್ನು ಹಿಂದಿಕ್ಕಿದ್ದಾರೆ. ಧವನ್ 4 ಶತಕಕ್ಕಾಗಿ 24 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಗಿಲ್ ಕೇವಲ 21 ಇನ್ನಿಂಗ್ಸ್ ಗಳಲ್ಲಿ 4 ಶತಕ ಸಾಧನೆ ಮಾಡಿದ್ದು, ಕಡಿಮೆ ಇನ್ನಿಂಗ್ಸ್ ನಲ್ಲಿ 4 ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವುದು ಪಾಕಿಸ್ತಾನದ ಇಮಾಮ್ ಉಲ್ ಹಕ್, ಇವರು ಕೇವಲ9 ಇನ್ನಿಂಗ್ಸ್ ಗಳಲ್ಲೇ 4 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಇದ್ದು ಇವರು 16 ಇನ್ನಿಂಗ್ಸ್ ಗಳಲ್ಲಿ 4 ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ನ ಡೆನ್ನಿಸ್ ಆ್ಯಮಿಸ್ 18ಇನ್ನಿಂಗ್ಸ್ ನಲ್ಲಿ 4 ಶತಕ ಸಿಡಿಸಿದ್ದಾರೆ.

ವೆಸ್ಟ್ ಇಂಡೀಸ್ ನ ಶಿಮ್ರಾನ್ ಹೇಟ್ಮರ್ 22 ಇನ್ನಿಂಗ್ಸ್ ನಲ್ಲಿ 4 ಶತಕ ಸಿಡಿಸಿದ್ದಾರೆ. ಭಾರತದ ಧವನ್ 24 ಇನ್ನಿಂಗ್ಸ್ ನಲ್ಲಿ 4 ಶತಕ ಸಿಡಿಸಿದ್ದಾರೆ.

STAT: Fewest innings to four ODI 100s
9 Imam-ul-Haq
16 Quinton de Kock
18 Dennis Amiss
21 Shubman Gill
22 Shimron Hetmyer
Previous quickest for India: Shikhar Dhawan (24 innings)

 

SCROLL FOR NEXT