ರಿಷಿ ಸುನಕ್-ಆಂಥೋನಿ ಅಲ್ಬನೀಸ್ 
ಕ್ರಿಕೆಟ್

ಆಶಸ್ ಸರಣಿ: ಬೈರ್‌ಸ್ಟೋ ಔಟ್ ವಿವಾದ; ಬ್ರಿಟನ್ ಮತ್ತು ಆಸ್ಟ್ರೇಲಿಯಾ ಪ್ರಧಾನಿಗಳ ನಡುವೆ ವಾಕ್ಸಮರ

ಲಾರ್ಡ್ಸ್ ನಲ್ಲಿ ನಡೆದ ಆಶಸ್ ಸರಣಿಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿನ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಔಟಾ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಈ ಪ್ರಕರಣ ಮತ್ತೊಂದು ಮಜುಲನ್ನು ಪಡೆದುಕೊಂಡಿದೆ. 

ನವದೆಹಲಿ: ಲಾರ್ಡ್ಸ್ ನಲ್ಲಿ ನಡೆದ ಆಶಸ್ ಸರಣಿಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿನ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಔಟಾ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಈ ಪ್ರಕರಣ ಮತ್ತೊಂದು ಮಜುಲನ್ನು ಪಡೆದುಕೊಂಡಿದೆ. 

ಈ ಪ್ರಕರಣದಲ್ಲಿ ಬೆನ್ ಸ್ಟೋಕ್ಸ್ ತಂಡವನ್ನು ಬೆಂಬಲಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಇದು ಕ್ರೀಡಾಸ್ಪೂರ್ತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಬ್ರಿಟನ್ ಪ್ರಧಾನಿ ಆಸ್ಟ್ರೇಲಿಯ ತಂಡದ ಈ ನಡೆ ಕ್ರೀಡಾಮನೋಭಾವಕ್ಕೆ ವಿರುದ್ಧವಾಗಿದೆ. 'ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದ ರೀತಿಯಲ್ಲಿ ಎಂದಿಗೂ ಗೆಲ್ಲಲು ಬಯಸುವುದಿಲ್ಲ ಎಂದು ಹೇಳಿದ ಬೆನ್ ಸ್ಟೋಕ್ಸ್‌ಗೆ ಈ ವಿಷಯದಲ್ಲಿ ಪ್ರಧಾನಿ ಸುನಕ್ ಸಹಮತ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ ಪ್ರಧಾನಿ ಹೇಳಿಕೆ ಬೆನ್ನಲ್ಲೇ ಆಸ್ಟ್ರೇಲಿಯಾದ ಪಿಎಂ ಆಂಥೋನಿ ಅಲ್ಬನೀಸ್ ಕೂಡ ತಿರುಗೇಟು ನೀಡಿದ್ದಾರೆ. ಬ್ರಿಟನ್‌ನ ಪಿಎಂ ಸುನಕ್ ಅವರಂತೆ ಕ್ರಿಕೆಟ್ ಅನ್ನು ಇಷ್ಟಪಡುವ ಅಲ್ಬನೀಸ್, ಇಂಗ್ಲೆಂಡ್ ವಿರುದ್ಧ ತಮ್ಮ ಆಶಸ್ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾದ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಬಗ್ಗೆ ನನಗೆ ಹೆಮ್ಮೆ ಇದೆ. ಆಶಿಸ್ ಸರಣಿ ಗೆದ್ದು ವಿಜಯಶಾಲಿಯಾಗಿ ಮನೆಗೆ ಹಿಂದಿರುಗುವವರನ್ನು ಸ್ವಾಗತಿಸಲು ಎದುರುನೋಡುತ್ತೇನೆ ಎಂದು ಹೇಳಿದ್ದಾರೆ.

ಟೆಸ್ಟ್‌ನ ಕೊನೆಯ ದಿನದಂದು ಬೇರ್‌ಸ್ಟೋವ್ ಅವರನ್ನು ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ ಔಟ್ ಮಾಡಿದ ರೀತಿಯನ್ನು ಇಂಗ್ಲಿಷ್ ತಂಡದ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಟೀಕಿಸಿದರು. ಇದು ಅವರ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಈ ರೀತಿಯ ಪಂದ್ಯವನ್ನು ಗೆಲ್ಲಲು ನಾನು ಎಂದಿಗೂ ಬಯಸುವುದಿಲ್ಲ ಎಂದು ಸ್ಟೋಕ್ಸ್ ಹೇಳಿದ್ದರು. ಬ್ರಿಟನ್‌ನ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಈ ವಿಷಯದ ಬಗ್ಗೆ ಸ್ಟೋಕ್ಸ್ ಪರವಾಗಿ ನಿಂತರು. ಆಶಸ್‌ನ ಎರಡನೇ ಟೆಸ್ಟ್ ಪಂದ್ಯ ವೀಕ್ಷಿಸಲು ಸುನಕ್ ಶನಿವಾರ ಲಾರ್ಡ್ಸ್ ಮೈದಾನಕ್ಕೆ ಆಗಮಿಸಿದ್ದರು.

ಉಭಯ ದೇಶಗಳ ಆಟಗಾರರ ನಡುವೆ ವೈಮನಸ್ಸು ಕಂಡು ಬಂತು. ಬೈರ್‌ಸ್ಟೋವ್ ಔಟಾದ ಈ ಘಟನೆಯ ನಂತರ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರ ಸಂಬಂಧದಲ್ಲಿ ಹದಗೆಟ್ಟಿತ್ತು. ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಕೂಡ ಅಲೆಕ್ಸ್ ಕ್ಯಾರಿ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಅಷ್ಟೇ ಅಲ್ಲದೆ ಬ್ರಾಡ್ ತನ್ನ ಕೋಪವನ್ನು ಕ್ಯಾರಿಯ ಮೇಲೆ ಮಾತ್ರವಲ್ಲದೆ ಆಸ್ಟ್ರೇಲಿಯಾದ ನಾಯಕನ ಮೇಲೂ ಹೊರಹಾಕಿದರು. ಕ್ರಿಕೆಟ್‌ನಲ್ಲಿ ಇದಕ್ಕಿಂತ ಕೆಟ್ಟದ್ದನ್ನು ನಾನು ನೋಡಿಲ್ಲ ಎಂದು ಹೇಳಿದ್ದರು.

ಬ್ಯಾಟಿಂಗ್ ವೇಳೆ ಬೈರ್‌ಸ್ಟೋವ್ ಕ್ರೀಸ್‌ನಿಂದ ಹೊರಬಂದರು. ಈ ವೇಳೆ ಕೆರ್ರಿ ಸ್ಟಂಪ್ ಮಾಡಿದರು. ಲಾರ್ಡ್ಸ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ಗೆಲುವಿಗೆ 371 ರನ್ ಗಳ ಗುರಿ ಹೊಂದಿತ್ತು. ಕೊನೆಯ ದಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ ರೂಪದಲ್ಲಿ ಮೊದಲ ಪೆಟ್ಟು ಬಿದ್ದು ಜಾನಿ ಬೈರ್ ಸ್ಟೋವ್ ಬ್ಯಾಟಿಂಗ್ ಗೆ ಇಳಿದರು. ಕ್ಯಾಮರೂನ್ ಗ್ರೀನ್ ಅವರ ಚೆಂಡನ್ನು ಆಡಿದ ನಂತರ, ಇನ್ನೊಂದು ತುದಿಯಲ್ಲಿ ನಾಯಕ ಬೆನ್ ಸ್ಟೋಕ್ಸ್ ಅವರೊಂದಿಗೆ ಮಾತನಾಡಲು ಕ್ರಿಸ್ ನಿಂದ ಹೊರಬಂದರು. ಈ ವೇಳೆ ವಿಕೆಟ್ ಕೀಪರ್ ಕ್ಯಾರಿ ಎಸೆದ ಚೆಂಡು ಸ್ಟಂಪ್‌ ಗೆ ಬಡಿಯಿತು. ಇದಾದ ನಂತರ ಆಸ್ಟ್ರೇಲಿಯ ತಂಡ ಔಟ್ ಗೆ ಮನವಿ ಮಾಡಿತು. ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರಿಂದ ಬೈರ್‌ಸ್ಟೋವ್ ಪೆವಿಲಿಯನ್‌ಗೆ ಮರಳಬೇಕಾಯಿತು. ಆಗ ಮೈದಾನದಲ್ಲಿದ್ದ ಪ್ರೇಕ್ಷಕರು ಆಸ್ಟ್ರೇಲಿಯ ತಂಡದ ವಿರುದ್ಧ ಘೋಷಣೆಗಳನ್ನು ಕೂಗಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT