ಕ್ರಿಕೆಟ್

ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್: 421 ರನ್ ಗೆ ಭಾರತ ಡಿಕ್ಲೇರ್, 271 ರನ್ ಮುನ್ನಡೆ

Nagaraja AB

ಡೊಮಿನಿಕಾ: ಡೊಮಿನಿಕಾದಲ್ಲಿ ಶುಕ್ರವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್‌ ನಷ್ಟಕ್ಕೆ 421 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಭಾರತ ತಂಡ ಒಟ್ಟಾರೆ 271 ರನ್‌ಗಳ ಮುನ್ನಡೆ ಸಾಧಿಸಿದೆ. 

ನಿನ್ನೆ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದ ಭಾರತ ಇಂದು ಆಟವನ್ನು ಪುನರ್ ಆರಂಭಿಸಿದಾಗ ಯಶಸ್ವಿ ಜೈಸಾಲ್ವ್ 387 ಬಾಲ್ ಗಳಲ್ಲಿ 171 ರನ್ ಗಳಿಸಿ ಔಟಾದರೆ, ಕೊಹ್ಲಿ 76 ರನ್ ಗಳಿಗೆ ಫೆವಿಲಿಯನ್ ಹಾದಿ ಹಿಡಿದರು. ಪಂದ್ಯ ಡಿಕ್ಲೇರ್ ಆಗುವ ವೇಳೆ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಕ್ರೀಸ್ ನಲ್ಲಿದ್ದರು. 

ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲಿ 150 ರನ್ ಗಳಿಸಿದ ಮೂರನೇ ಭಾರತೀಯ ಎನಿಸಿಕೊಂಡರು. ಆದರೆ ವಿರಾಟ್ ಕೊಹ್ಲಿ ಅರ್ಧ ಶತಕಕ್ಕಾಗಿ ಶ್ರಮಿಸಬೇಕಾಯಿತು. ಗುರುವಾರ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಜೈಸ್ವಾಲ್ ದ್ವಿಶತಕ ಗಳಿಸುವ  ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆಯನ್ನು ಅಲ್ಜಾರಿ ಜೋಸೆಫ್‌ ಕಸಿದುಕೊಂಡರು.ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಆಗಿತ್ತು. 

SCROLL FOR NEXT