ಭಾರತ-ಬಾಂಗ್ಲಾದೇಶ 
ಕ್ರಿಕೆಟ್

ಬಾಂಗ್ಲಾ ವಿರುದ್ಧ ಮೊದಲ ಬಾರಿಗೆ ಏಕದಿನ ಪಂದ್ಯ ಸೋತ ಭಾರತ ಮಹಿಳಾ ತಂಡ!

ಭಾರತ ಮತ್ತು ಬಾಂಗ್ಲಾದೇಶದ ಮಹಿಳಾ ತಂಡಗಳ ನಡುವಿನ ODI ಸರಣಿಯ ಮೊದಲ ಪಂದ್ಯವು ಢಾಕಾದಲ್ಲಿ ನಡೆಯಿತು. ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮಳೆ ಅಡ್ಡಿ ನಡುವೆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 152 ರನ್ ಪೇರಿಸಿತ್ತು. 

ಭಾರತ ಮತ್ತು ಬಾಂಗ್ಲಾದೇಶದ ಮಹಿಳಾ ತಂಡಗಳ ನಡುವಿನ ODI ಸರಣಿಯ ಮೊದಲ ಪಂದ್ಯವು ಢಾಕಾದಲ್ಲಿ ನಡೆಯಿತು. ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮಳೆ ಅಡ್ಡಿ ನಡುವೆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 152 ರನ್ ಪೇರಿಸಿತ್ತು. 

ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ ಕೇವಲ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಡಕ್ವರ್ತ್ ಲೂಯಿಸ್ ವಿಧಾನದಡಿಯಲ್ಲಿ 40 ರನ್‌ಗಳಿಂದ ಸೋಲನುಭವಿಸಿತು. ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿದೆ.

ಅನುಷಾ ರನೌಟ್‌ನೊಂದಿಗೆ ಭಾರತದ ಇನ್ನಿಂಗ್ಸ್ 113 ರನ್‌ಗಳಿಗೆ ಪತನಗೊಂಡಿತು. ಬಾಂಗ್ಲಾದೇಶ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಭಾರತವನ್ನು ಸೋಲಿಸಿತು. ಮಳೆ ಅಡ್ಡಿಯಿಂದಾಗಿ ಪಂದ್ಯವನ್ನು 44 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 43 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 35.5 ಓವರ್‌ಗಳಲ್ಲಿ 113 ರನ್ ಗಳಿಸಲಷ್ಟೇ ಶಕ್ತವಾಗಿ ಡಕ್‌ವರ್ತ್ ಲೂಯಿಸ್ ವಿಧಾನದಡಿ 40 ರನ್‌ಗಳಿಂದ ಸೋಲುಂಡಿತು.

ಟಿ20 ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿರುವ ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋತಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬಲಿಷ್ಠ ಪುನರಾಗಮನಕ್ಕೆ ಪ್ರಯತ್ನಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT