ಧರ್ಮಕ್ಕಾಗಿ ಕ್ರಿಕೆಟ್ ತ್ಯಜಿಸಿದ ಪಾಕಿಸ್ತಾನದ ಸ್ಟಾರ್ ಆಟಗಾರ್ತಿ 
ಕ್ರಿಕೆಟ್

ಇಸ್ಲಾಂಗಾಗಿ ಬದುಕು ಮೀಸಲು: ಧರ್ಮಕ್ಕಾಗಿ ಕ್ರಿಕೆಟ್ ತ್ಯಜಿಸಿದ ಪಾಕಿಸ್ತಾನದ ಸ್ಟಾರ್ ಆಟಗಾರ್ತಿ

ಧಾರ್ಮಿಕತೆಗಾಗಿ ಪಾಕಿಸ್ತಾನದ ಸ್ಚಾರ್ ಆಟಗಾರ್ತಿಯೊಬ್ಬರು ಕ್ರಿಕೆಟ್ ಅನ್ನೇ ತ್ಯಜಿಸಲು ಮುಂದಾಗಿದ್ದಾರೆ.

ಇಸ್ಲಾಮಾಬಾದ್‌: ಧಾರ್ಮಿಕತೆಗಾಗಿ ಪಾಕಿಸ್ತಾನದ ಸ್ಚಾರ್ ಆಟಗಾರ್ತಿಯೊಬ್ಬರು ಕ್ರಿಕೆಟ್ ಅನ್ನೇ ತ್ಯಜಿಸಲು ಮುಂದಾಗಿದ್ದಾರೆ.

ಹೌದು.. ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಸ್ಠಾರ್ ಆಟಗಾರ್ತಿ ಆಯೇಶಾ ನಸೀಮ್ ತನ್ನ 18ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ತನ್ನ ಮುಂದಿನ ಬದುಕನ್ನು ಇಸ್ಲಾಂ ಧರ್ಮಕ್ಕಾಗಿ ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ. 'ನಾನು ಇನ್ಮುಂದೆ ಇಸ್ಲಾಮಿಕ್‌ ಧರ್ಮದಂತೆಯೇ ಬದುಕುತ್ತೇನೆ, ಇಸ್ಲಾಮಿಕ್‌ ತತ್ವ ಬೋಧನೆಯನ್ನ ಅನುಸರಿಸುತ್ತೇನೆ ಎಂದು ಹೇಳಿರುವ ಆಯೇಶಾ ನಸೀಮ್, ನಾನು ಕ್ರಿಕೆಟ್ ಆಟ ತ್ಯಜಿಸುತ್ತಿದ್ದೇನೆ ಮತ್ತು ಇಸ್ಲಾಂ ಧರ್ಮದ ಪ್ರಕಾರ ನನ್ನ ಜೀವನವನ್ನು ನಡೆಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ.

ಆರಂಭಿಕ ಹಂತದಿಂದಲೇ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದ ಆಯೇಶಾ, ಮುಂದೆ ತಂಡ ನಾಯಕತ್ವ ವಹಿಸುವ ಭರವಸೆ ಮೂಡಿಸಿದ್ದರು. ಇದೀಗ ನಿವೃತ್ತಿ ಘೋಷಿಸಿ ನಿರಾಸೆ ಮೂಡಿಸಿದ್ದಾರೆ. ನಸೀಮ್ ಅವರು ಇಸ್ಲಾಂ ಧರ್ಮದ ಪ್ರಕಾರ ತಮ್ಮ ಜೀವನವನ್ನು ನಡೆಸುವ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಚಾರವಾಗಿ  ನಸೀಮ್ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

18 ವರ್ಷದ ಪಾಕ್‌ ಮಹಿಳಾ ಆಟಗಾರ್ತಿ ಆಯೇಶಾ ನಸೀಮ್ ಈವರೆಗೆ ನಾಲ್ಕು ಏಕದಿನ, 30 T20 ಪಂದ್ಯಗಳನ್ನಾಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ ಆಗಿ ಟಿ20 ಕ್ರಿಕೆಟ್‌ನಲ್ಲಿ 18:45 ಸರಾಸರಿಯಲ್ಲಿ 369 ರನ್‌ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಕೇವಲ 33 ರನ್‌ ಗಳಿಸಿದ್ದಾರೆ. 2023ರ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಕಣಕ್ಕಿಳಿದಾಗ 25 ಎಸೆತಗಳಲ್ಲಿ ಸ್ಫೋಟಕ 43 ರನ್‌ ಸಿಡಿಸಿದ್ದರು. 2021ರಲ್ಲಿ ಆಯೇಶಾ ವೆಸ್ಟ್‌ ಇಂಡೀಸ್‌ ವಿರುದ್ಧ ಕಣಕ್ಕಿಳಿದಾಗ 33 ಎಸೆತಗಳಲ್ಲಿ 45 ರನ್‌ ಗಳಿಸಿದ್ದರು. ಈ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದೇ ವರ್ಷದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಕ್ರಿಕೆಟ್‌ನಲ್ಲಿ 31 ಎಸೆತಗಳಲ್ಲಿ 45 ರನ್‌ ಗಳಿಸಿ ಮಿಂಚಿದ್ದರು.  
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT