ಕ್ರಿಕೆಟ್

2ನೇ ಏಕದಿನ ಪಂದ್ಯ: ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್; ಪಾಂಡ್ಯಾ ಬಳಗಕ್ಕೆ ಸೋಲಿನ ಶಾಕ್, ಸರಣಿ ಸಮಬಲ

Srinivasamurthy VN

ಬ್ರಿಡ್ಜ್‌ಟೌನ್‌: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್ ತಂಡ ಟೀಂ ಇಂಡಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. ಈ ಮೂಲಕ ಸತತ ಮೂರು ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಗೂ ಭಾರತದ (India vs West Indies) ವಿರುದ್ಧ ಮೊದಲ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯಾ ಬಳಕ 40.5 ಓವರ್ ನಲ್ಲೇ ಕೇವಲ 181 ರನ್ ಗಳಿಸಿ ಆಲೌಟ್ ಆಯಿತು. ಏಕದಿನ ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾದ ಬ್ಯಾಟಿಂಗ್ ಲೈನಪ್ ಗೆ ವಿಂಡೀಸ್ ಸ್ಪಿನ್ನರ್ ಗುಡ್ಕೇಶ್ ಮೋತಿ ಮತ್ತು ರೊಮಾರಿಯೋ ಶೆಫರ್ಡ್ ಮರ್ಮಾಘಾತ ನೀಡಿ ತಲಾ 3 ವಿಕೆಟ್ ಪಡೆದರು. ಅಲ್ಜಾಮ್ ಜೋಸೆಫ್ 2 ವಿಕೆಟ್ ಪಡೆದರೆ, ಸೀಲ್ಸ್ ಮತ್ತು ಕರಯ್ಯಾ ತಲಾ 1 ವಿಕೆಟ್ ಪಡೆದರು. 

ಭಾರತದ ಪರ ಇಶಾನ್ ಕಿಶನ್ 55 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಹೇಳಿಕೊಳ್ಳಿವಂತಹ ಪ್ರದರ್ಶನ ಮೂಡಿ ಬರಲಿಲ್ಲ. ಭಾರತ ನೀಡಿದ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ವಿಂಡೀಸ್ ಪಡೆ ನಾಯಕ ಶಾಯ್ ಹೋಪ್ ರ ಅಮೋಘ ಅರ್ಧಶತಕ (ಅಜೇಯ 63 ರನ್) ನೆರವಿನಿಂದ 36.4 ಓವರ್ ಗಳಲ್ಲಿಯೇ 4 ವಿಕೆಟ್ ಕಳೆದುಕೊಂಡು 182 ರನ್ ಪೇರಿಸಿ 6 ವಿಕೆಟ್ ಗಳ ಅಮೋಘ ಜಯ ಸಾಧಿಸಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ವಿಂಡೀಸ್ 1-1 ಸಮಬಲ ಸಾಧಿಸಿದೆ.

SCROLL FOR NEXT