ಆಸ್ಟ್ರೇಲಿಯಾದ ಬ್ಯಾಟರ್ ಗಳಾದ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ 
ಕ್ರಿಕೆಟ್

WTC ಫೈನಲ್ 2023: ಹೆಡ್- ಸ್ಮಿತ್ ಅಬ್ಬರ,  ಮೊದಲ ದಿನದಾಟದ ಅಂತ್ಯ; 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದ ಆಸ್ಟ್ರೇಲಿಯಾ

ಲಂಡನ್ ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ದಿನದಂದು ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಹಾಗೂ ಸ್ಮೀವ್ ಸ್ಮಿತ್ ಅವರ ಅಜೇಯ 95 ರನ್ ಗಳ ನೆರವಿನಿಂದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 85 ಓವರ್ ಗೆ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ. 

ಲಂಡನ್: ಲಂಡನ್ ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ದಿನದಂದು ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಹಾಗೂ ಸ್ಮೀವ್ ಸ್ಮಿತ್ ಅವರ ಅಜೇಯ 95 ರನ್ ಗಳ ನೆರವಿನಿಂದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 85 ಓವರ್ ಗೆ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ. 

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿಯೇ ಮೊಹಮದ್ ಸಿರಾಜ್ ಬೌಲಿಂಗ್ ನಲ್ಲಿ ಉಸ್ಮಾನ್ ಕವಾಜಾ ಶೂನ್ಯಕ್ಕೆ ಔಟಾದರೆ, ಡೇವಿಡ್​ ವಾರ್ನರ್​ 43 ರನ್ ಗಳಿಸಿ,  ಶಾರ್ದೂಲ್​ ಠಾಕೂರ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. 

ಭೋಜನ ವಿರಾಮ ನಂತರ  ಕ್ರೀಸ್​ಗೆ ಬಂದ ಮಾರ್ನಸ್ ಲ್ಯಾಬುಸ್ಚಾಗ್ನೆ 26 ರನ್​ ಗಳಿಸಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಔಟಾದರು. ನಂತರ ಒಂದಾದ ಸ್ಟೀವ್​ ಸ್ಮಿತ್​ ಮತ್ತು ಟ್ರಾವಿಸ್​ ಹೆಡ್​ ಭಾರತೀಯ ಬೌಲರ್​ಗಳ ಬೆಂಡತ್ತಿದರು.

ಈ ಜೋಡಿ  ದ್ವಿಶತಕದ ಆಟವಾಡಿದ್ದು ದಿನದಾಟದ ಅಂತ್ಯಕ್ಕೆ  ಟ್ರಾವಿಸ್ ಹೆಡ್ 156 ಎಸೆತದಲ್ಲಿ 1 ಸಿಕ್ಸ್ ಮತ್ತು 22 ಬೌಂಡರಿಗಳ ಮೂಲಕ 146 ರನ್ ಮತ್ತು ಸ್ಟೀವ್​ ಸ್ಮಿತ್​ 227 ಎಸೆತದಲ್ಲಿ 14 ಬೌಂಡರಿಗಳ ಮೂಲಕ 95 ರನ್​ ಗಳಿಸಿದ್ದು, ನಾಳೆಗೆ ಕ್ರೀಸ್​ ಕಾಯ್ದಿರಿಸಿಕೊಂಡಿದ್ದಾರೆ.

ಭಾರತದ ಪರ ಮೊಹಮ್ಮದ್ ಶಮಿ,  ಮೊಹಮ್ಮದ್ ಸಿರಾಜ್​ , ಹಾಗೂ ಶಾರ್ದೂಲ್​ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್