ಕ್ರಿಕೆಟ್

4ನೇ ಟೆಸ್ಟ್: ಟೀಂ ಇಂಡಿಯಾಗೆ ಗಾಯದ ಸಮಸ್ಯೆ: ಬೆನ್ನು ನೋವು ಎಂದ ಶ್ರೇಯಸ್ ಅಯ್ಯರ್!

Srinivasamurthy VN

ಅಹ್ಮದಾಬಾದ್: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ 4ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದ್ದು, ತಂಡ ಪ್ರಮುಖ ಬ್ಯಾಟರ್ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

ನಿನ್ನೆ ಮೂರನೇ ದಿನದಾಟದ ನಡುವೆ ಭಾರತ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಬೆನ್ನು ನೋವಿಗೆ ತುತ್ತಾಗಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಿ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಇದೇ ಕಾರಣಕ್ಕೆ ಶ್ರೇಯಸ್ ಅಯ್ಯರ್ ಇನ್ನೂ ಬ್ಯಾಟಿಂಗ್ ಗೆ ಬಂದಿಲ್ಲ ಎಂದು ಹೇಳಲಾಗಿದೆ. 

ಪ್ರಸ್ತುತ, ಅಯ್ಯರ್ ಅವರನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಬಿಸಿಸಿಐ (BCCI) ಕೂಡ ಮಾಹಿತಿ ಹಂಚಿಕೊಂಡಿದೆ. ಅಹ್ಮದಾಬಾದ್ ಟೆಸ್ಟ್‌ನ ಮೂರನೇ ದಿನದಂದು ಶ್ರೇಯಸ್ ಅಯ್ಯರ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರನ್ನು ಸ್ಕ್ಯಾನ್‌ಗೆ ಕರೆದೊಯ್ಯಲಾಗಿದೆ. ಬಿಸಿಸಿಐನ ವೈದ್ಯಕೀಯ ತಂಡವು ಅಯ್ಯರ್ ಗಾಯದ ಮೇಲೆ ನಿರಂತರವಾಗಿ ನಿಗಾ ಇರಿಸಿದೆ ಎಂದು ಹೇಳಿಕೊಂಡಿದೆ.

ಬೆನ್ನು ನೋವಿನ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ಅಹಮದಾಬಾದ್ ಟೆಸ್ಟ್‌ನಲ್ಲಿ ಇನ್ನೂ ಬ್ಯಾಟಿಂಗ್‌ಗೆ ಬಂದಿಲ್ಲ. ಸಾಮಾನ್ಯವಾಗಿ ಅವರು 4 ನೇ ಕ್ರಮಾಂಕದಲ್ಲಿ ಮಾತ್ರ ಬ್ಯಾಟ್ ಮಾಡುತ್ತಾರೆ. ಆದರೆ ಮೊದಲ ಇನ್ನಿಂಗ್ಸ್​ನಲ್ಲಿ ಅವರ ಸ್ಥಾನದಲ್ಲಿ ರವೀಂದ್ರ ಜಡೇಜಾ ಮೂರನೇ ದಿನ ಬ್ಯಾಟಿಂಗ್‌ಗೆ ಇಳಿದಿದ್ದರು. ನಾಲ್ಕನೇ ದಿನದಂದು ಜಡೇಜಾ ಔಟಾದಾಗಲೂ ಕೂಡ ಶ್ರೇಯಸ್​ ಬ್ಯಾಟಿಂಗ್​ ಬರಲಿಲ್ಲ. ಬದಲಿಗೆ ವಿಕೆಟ್ ಕೀಪರ್ ಕೆ. ಎಸ್. ಭರತ್ ಬ್ಯಾಟಿಂಗ್‌ಗೆ ಬಂದಿದ್ದಾರೆ. ಇದರಿಂದ ಶ್ರೇಯಸ್ ಅಯ್ಯರ್ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವುದರ ಬಗ್ಗೆ ಅನುಮಾನ ಮೂಡುತ್ತಿದೆ. ಒಂದು ವೇಳೆ ಅಯ್ಯರ್ ಬ್ಯಾಟಿಂಗ್​ಗೆ ಬರದಿದ್ದರೆ, ಭಾರತಕ್ಕೆ ಭಾರಿ ಹಿನ್ನಡೆಯುಂಟಾಗಲಿದೆ.

SCROLL FOR NEXT