ಕ್ರಿಕೆಟ್

ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದರೆ ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕ: ಗವಾಸ್ಕರ್

Nagaraja AB

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಗೆದ್ದರೆ, ಈ ವರ್ಷದ ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯ ಏಕದಿನ ಪಂದ್ಯಗಳ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಳ್ಳಬಹುದು ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಆಸೀಸ್ ವಿರುದ್ಧ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. 2022 ಐಪಿಎಲ್ ನಲ್ಲಿ ಚೊಚ್ಚಲ ಪ್ರದರ್ಶನದಲ್ಲಿಯೇ ಪ್ರಶಸ್ತಿ ಮುಡಿಗೇರಿಸಿಕೊಂಡ ಗುಜರಾತ್ ಟೈಟನ್ಸ್‌ ನಾಯಕರಾಗಿದ್ದ 29 ವರ್ಷದ ಆಲ್‌ರೌಂಡರ್, ಪ್ರಸ್ತುತ ನಿಗದಿತ ಓವರ್ ಗಳ ಟೀಂ ಇಂಡಿಯಾ ಉಪ ನಾಯಕರಾಗಿದ್ದಾರೆ.

ಐಪಿಎಲ್  ಮತ್ತು ಟಿ-20ಯಲ್ಲಿ ಗುಜರಾತ್ ಟೈಟನ್ಸ್ ಮತ್ತು ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ತೋರಿದ ನಾಯಕತ್ವದಿಂದ ಪ್ರಭಾವಿತನಾಗಿದ್ದೇನೆ.  ಮುಂಬೈಯಲ್ಲಿ ನಡೆಯಲಿರುವ ಆಸೀಸ್ ವಿರುದ್ಧದ ಪಂದ್ಯ ಗೆದ್ದರೆ, 2023 ವಿಶ್ವಕಪ್ ನಂತರ ಪಾಂಡ್ಯ ಟೀಂ ಇಂಡಿಯಾದ ನಾಯಕರಾಗಬಹುದು ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ ಗೆ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ  ಮಧ್ಯಮ ಕ್ರಮಾಂಕದಲ್ಲಿ ಪ್ರಭಾವಿ ಆಟಗಾರ ಮತ್ತು ಗೇಮ್ ಚೇಂಜರ್ ಆಗಿದ್ದು, ಅವರ ಉಪಸ್ಥಿತಿ ಟೀಂ ಇಂಡಿಯಾಕ್ಕೆ ಅತ್ಯವಶ್ಯಕವಾಗಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT