ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 4 ವಿಕೆಟ್ ಗಳ ರೋಚಕ ಜಯ 
ಕ್ರಿಕೆಟ್

ಐಪಿಎಲ್ 2023: ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 4 ವಿಕೆಟ್ ಗಳ ರೋಚಕ ಜಯ

ಶಿಮ್ಲಾದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 4 ವಿಕೆಟ್ ಗಳ ರೋಚಕ ಜಯ ದೊರೆತಿದೆ.

ಶಿಮ್ಲಾ: ಶಿಮ್ಲಾದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ರಾಜಸ್ಥಾನಕ್ಕೆ 4 ವಿಕೆಟ್ ಗಳ ರೋಚಕ ಜಯ ದೊರೆತಿದೆ.
 
ದೇವದತ್ ಪಡಿಕಲ್ (30 ಎಸೆತಗಳಲ್ಲಿ 51 ರನ್) ಯಶಸ್ವಿ ಜೈಸ್ವಾಲ್ (36 ಎಸೆತಗಳಲ್ಲಿ 50 ರನ್) ಶಿಮ್ರಾನ್ ಹೆಟ್ಮೇಯರ್ (28 ಎಸೆತಗಳಲ್ಲಿ 46 ರನ್) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನಕ್ಕೆ 4 ವಿಕೆಟ್ ಗಳ ಜಯ ಗಳಿಸಿತು.

ಈ ಗೆಲುವಿನ ಮೂಲಕ ರಾಜಸ್ಥಾನ ತಂಡದ ಪ್ಲೇ ಆಫ್ ಕನಸು ಜೀವಂತವಾಗಿದೆ. ರಾಜಸ್ಥಾನ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದ  ಪಂಜಾಬ್‌ ಕಿಂಗ್ಸ್‌ ಟೂರ್ನಿಯಿಂದ ಹೊರಬಿದ್ದಿದೆ. 

ರಾಜಸ್ಥಾನ ತಂಡ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ 14 ಅಂಕ ಪಡೆದು, +0.148 ರನ್‌ರೇಟ್‌ನೊಂದಿಗೆ 5 ನೇ ಸ್ಥಾನಕ್ಕೇರಿದೆ. ರಾಜಸ್ಥಾನ ತಂಡ ಪ್ಲೇ ಆಫ್ ತಲುಪಬೇಕಾದರೆ. ಮೇ.22 ರಂದು ನಡೆಯಲಿರುವ ಪಂದ್ಯದಲ್ಲಿ ಆರ್ ಸಿಬಿ ಹಾಗೂ ಮುಂಬೈ ತಂಡಗಳು ಸೋಲು ಕಾಣಬೇಕಿದೆ.
 
ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ರಾಜಸ್ಥಾನ್‌ ರಾಯಲ್ಸ್‌ 19.4 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!