ಕ್ರಿಕೆಟ್

ಐಪಿಎಲ್ 2023: ಐಪಿಎಲ್ ಇತಿಹಾಸದ ಬೇಡವಾದ ಕಳಪೆ ದಾಖಲೆ ಬರೆದ ಚೆನ್ನೈನ ಸ್ಟಾರ್ ಬೌಲರ್!

Srinivasamurthy VN

ಅಹ್ಮದಾಬಾದ್: ಐಪಿಎಲ್ 2023ರ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬೌಲರ್ ತುಷಾರ್ ದೇಶಪಾಂಡೆ ಐಪಿಎಲ್ ಇತಿಹಾಸದ ಬೇಡವಾದ ಕಳಪೆ ದಾಖಲೆಯೊಂದನ್ನು ಬರೆದಿದ್ದಾರೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ತುಷಾರ್ ದೇಶಪಾಂಡೆ ಬರೊಬ್ಬರಿ 56 ರನ್ ಗಳನ್ನು ನೀಡುವ ಮೂಲಕ ಈ ಕಳಪೆ ದಾಖಲೆಗೆ ಪಾತ್ರರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ತುಷಾರ್ ದೇಶಪಾಂಡೆ ಒಟ್ಟು 4 ಓವರ್ ಎಸೆದು 14ರ ಸರಾಸರಿಯಲ್ಲಿ 56 ರನ್ ನೀಡಿದ್ದಾರೆ.

ಅಂತೆಯೇ ಒಂದೂ ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದರು. ಆ ಮೂಲಕ ತುಷಾರ್ ದೇಶಪಾಂಡೆ ಐಪಿಎಲ್ ಫೈನಲ್ ನಲ್ಲಿ 3ನೇ ದುಬಾರಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮೊದಲು 2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿಬಿಯ ಶೇನ್ ವಾಟ್ಸನ್ 61 ರನ್ ನೀಡಿದ್ದರು. ಈ ದಾಖಲೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

Most expensive bowling returns in IPL finals
0/61 - Shane Watson (RCB) vs SRH, Bengaluru, 2016
0/56 - Lockie Ferguson (KKR) vs CSK, Dubai, 2021
0/56 - Tushar Deshpande (CSK) vs GT, Ahmedabad, 2023
4/54 - Karanveer Singh (PBKS) vs KKR, Bengaluru, 2014

 

SCROLL FOR NEXT