ಸೆಮಿಫೈನಲ್ ಪ್ರವೇಶಿಸಿದ ರಾಷ್ಟ್ರಗಳ ಸಂಕೇತ 
ಕ್ರಿಕೆಟ್

ICC Cricket World Cup Semi-Final 2023: ಪಾಕಿಸ್ತಾನ ಮನೆಗೆ, ಸೆಮಿಫೈನಲ್ ಪಂದ್ಯಗಳನ್ನು ಪ್ರಕಟಿಸಿದ ಐಸಿಸಿ!

ಅಕ್ಟೋಬರ್ 5 ರಿಂದ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಈಗ ನಿರ್ಣಾಯಕ ಹಂತಕ್ಕೆ ಬಂದಿದ್ದು, ಸೆಮಿಫೈನಲ್ ಕದನದ ವಿವರವನ್ನು ಐಸಿಸಿ ಅಧಿಕೃತವಾಗಿ  ಪ್ರಕಟಿಸಿದೆ. 

ಮುಂಬೈ: ಅಕ್ಟೋಬರ್ 5 ರಿಂದ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಈಗ ನಿರ್ಣಾಯಕ ಹಂತಕ್ಕೆ ಬಂದಿದ್ದು, ಸೆಮಿಫೈನಲ್ ಕದನದ ವಿವರವನ್ನು ಐಸಿಸಿ ಅಧಿಕೃತವಾಗಿ  ಪ್ರಕಟಿಸಿದೆ. 

ಆರಂಭದಿಂದ ಇಲ್ಲಿಯವರೆಗೂ ಒಂದು ಪಂದ್ಯವನ್ನು ಸೋಲದೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್  ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದ್ದು, ಮನೆ ಕಡೆ ಹೋಗುವುದು ಖಚಿತವಾಗಿದೆ.

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 337 ರನ್ ಗಳ ಬೃಹತ್ ಮೊತ್ತ ಪೇರಿಸಿದ್ದರಿಂದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶವನ್ನು ತಪ್ಪಿಸಿಕೊಂಡಿತು.

ಭಾರತ ನಾಳೆ ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ. ಆದಾಗ್ಯೂ, ಈ ಪಂದ್ಯ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನವೆಂಬರ್ 15 ರಂದು ಮುಂಬೈಯಲ್ಲಿ ಭಾರತ Vs ನ್ಯೂಜಿಲೆಂಡ್ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯ ಮಧ್ಯಾಹ್ನ 2 ಗಂಟೆಗೆ  ನಡೆಯಲಿದೆ. ನವೆಂಬರ್ 16 ರಂದು ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ Vs ಆಸ್ಟ್ರೇಲಿಯಾ ನಡುವಣ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾರೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ: ಖರ್ಗೆ ಹೇಳಿಕೆ ಬೆಂಬಲಿಸಿದ ಎಂ.ಬಿ ಪಾಟೀಲ; ಡಿಕೆಶಿಗೆ ಪರೋಕ್ಷ ಟಾಂಗ್

U19 ಏಷ್ಯಾ ಕಪ್ ಫೈನಲ್‌: ಪಾಕ್ ವಿರುದ್ಧ ಸೋತರೂ ನಖ್ವಿ ಕೈಯಿಂದ ಪದಕ ಸ್ವೀಕರಿಸದ India ಯುವ ಪಡೆ, Video!

G RAM G ಮಸೂದೆ: ಬಿಜೆಪಿಯಿಂದ ಎರಡನೇ ಬಾರಿ 'ಮಹಾತ್ಮ ಗಾಂಧಿ ಹತ್ಯೆ'; ಚಿದಂಬರಂ ಕಿಡಿ

ನಾಯಕತ್ವ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಗರಂ; ನಾಯಕರಿಗೆ ಖಡಕ್ ಸಂದೇಶ

ಜಮ್ಮುವಿನ NIA ಕಚೇರಿ ಬಳಿ ಚೀನಾ ನಿರ್ಮಿತ ರೈಫಲ್ ಟೆಲಿಸ್ಕೋಪ್ ಪತ್ತೆ; ಭದ್ರತೆ ಹೆಚ್ಚಳ

SCROLL FOR NEXT