ಕ್ರಿಕೆಟ್

Ind vs NZ: ಉತ್ತಮವಾಗಿ ಆಡುತ್ತಿದ್ದ ಶುಭಮನ್ ಗಿಲ್ ರಿಟೈರ್ಡ್ ಹರ್ಟ್ ಆಗಿದ್ಯಾಕೆ?

Ramyashree GN

ಮುಂಬೈ: ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 23 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದ್ದ ವೇಳೆ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸಮನ್‌ ಶುಭಮನ್ ಗಿಲ್ ತಮ್ಮ ಎಡಗಾಲಿನ ಸೆಳೆತದಿಂದಾಗಿ 79 ರನ್ ಗಳಿಸಿ ರಿಟೈರ್ಡ್ ಹರ್ಟ್ ಆಗಿದ್ದಾರೆ.

ಆರಂಭಿಕರಾಗಿ ಬಂದ ಗಿಲ್ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು. ಈ ವಿಶ್ವಕಪ್ ಆವೃತ್ತಿಯಲ್ಲಿ ನಾಲ್ಕನೇ ಅರ್ಧಶತಕ ಸಿಡಿಸಿದ ಗಿಲ್, 23ನೇ ಓವರ್‌ನಲ್ಲಿ 65 ಎಸೆತಗಳಲ್ಲಿ 79 ರನ್‌ ಕಲೆಹಾಕಿದ್ದ ಅವರು ತೀವ್ರವಾದ ನೋವಿನಿಂದಾಗಿ ರಿಟೈರ್ಡ್ ಹರ್ಟ್ ಆಗಿದ್ದಾರೆ. 

ಮೈದಾನದಿಂದ ಹೊರಗುಳಿಯುವ ಮೊದಲು 24 ವರ್ಷದ ಗಿಲ್ 65 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ ಸಿಡಿಸಿದ್ದಾರೆ. ರೋಹಿತ್ ಶರ್ಮಾ (47) ಮತ್ತು 35 ರನ್‌ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರೊಂದಿಗೆ ಎರಡು ಪ್ರಮುಖ ಜೊತೆಯಾಟ ಆಡಿದರು.

ಶುಭಮನ್ ಗಿಲ್‌ಗೆ ಕಾಲಿನ ಸೆಳೆತ

ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 49 ರನ್ ಗಳಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಬಳಿಕ ವಿರಾಟ್ ಕೊಹ್ಲಿ ಮತ್ತು ಗಿಲ್ ಉತ್ತಮ ಜೊತೆಯಾಟವಾಡಿದರು. ಗಿಲ್ ಅವರು ರಿಟೈರ್ಡ್ ಹರ್ಟ್ ಆದ ಬಳಿಕ ಶ್ರೇಯರ್ ಅಯ್ಯರ್ ಬ್ಯಾಟಿಂಗ್ ಆಡುತ್ತಿದ್ದಾರೆ.

ಬಲಗೈ ಬ್ಯಾಟ್ಸಮನ್ ಗಿಲ್ ಅವರು ಚೇತರಿಸಿಕೊಂಡರೆ ಮತ್ತೊಂದು ವಿಕೆಟ್ ಬಿದ್ದ ಬಳಿಕ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತದೆ. 

ಸದ್ಯ ಟೀಂ ಇಂಡಿಯಾ 31 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.

SCROLL FOR NEXT