ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ವಿವಾದಿತ ಅಂಪೈರ್ ಗಳ ನೇಮಕ 
ಕ್ರಿಕೆಟ್

ICC Cricket World Cup 2023: ಫೈನಲ್ ಪಂದ್ಯಕ್ಕೆ ವಿವಾದಿತ ಅಂಪೈರ್ ಗಳ ನೇಮಕ, ಭಾರತದ ವಿರುದ್ಧ ಕಳಪೆ ಇತಿಹಾಸ!

ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿದ್ದು, ಇದರ ನಡುವೆಯೇ ಐಸಿಸಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ.

ಅಹ್ಮದಾಬಾದ್: ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿದ್ದು, ಇದರ ನಡುವೆಯೇ ಐಸಿಸಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವೆ ನಡೆಯಲ್ಲಿರುವ 2023 ರ ಏಕದಿನ ವಿಶ್ವಕಪ್​ನ (ICC World Cup 2023) ಫೈನಲ್ ಪಂದ್ಯಕ್ಕೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ (Narendra Modi Stadium in Ahmedabad) ಸಜ್ಜಾಗಿದೆ. ಈ ಉಭಯ ತಂಡಗಳು ಬರೋಬ್ಬರಿ 20 ವರ್ಷಗಳ ನಂತರ ಐಸಿಸಿ ಟೂರ್ನಿಯ ಫೈನಲ್ ಪಂದ್ಯ ಆಡುತ್ತಿವೆ. ಭಾರತವೇ ಫೈನಲ್ ಪಂದ್ಯದ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದರೂ ಅಭಿಮಾನಿಗಳಿಗೆ ಮಾತ್ರ ಅದೊಂದು ಆತಂಕ ಕಾಡಲಾರಂಭಿಸಿದೆ. ವಾಸ್ತವವಾಗಿ ಐಸಿಸಿ, ಫೈನಲ್ ಪಂದ್ಯಕ್ಕೆ ಅಂಪೈರ್​ಗಳ ಹೆಸರನ್ನು ಅಂತಿಮಗೊಳಿಸಿದೆ. ಇದರಲ್ಲಿ ಆಯ್ಕೆಯಾಗಿರುವ ಇಬ್ಬರು ಅಂಪೈರ್​ಗಳ ಹೆಸರನ್ನು ಕೇಳಿ ಟೀಂ ಇಂಡಿಯಾ ಅಭಿಮಾನಿಗಳು ಭಾರಿ ನಿರಾಸೆಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಭಾರತ ಸೋಲುವುದು ಖಚಿತ ಎನ್ನುತ್ತಿದ್ದಾರೆ.

ಹೌದು.. ಬಹು ನಿರೀಕ್ಷಿತ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್​ಗಳ ಹೆಸರನ್ನು ಐಸಿಸಿ ಅಂತಿಮಗೊಳಿಸಿದ್ದು, ಇದರಲ್ಲಿ ಆಯ್ಕೆಯಾಗಿರುವ ಇಬ್ಬರು ಅಂಪೈರ್​ಗಳ ಹೆಸರನ್ನು ಕೇಳಿ ಟೀಂ ಇಂಡಿಯಾ ಅಭಿಮಾನಿಗಳು ಭಾರಿ ನಿರಾಸೆಗೊಂಡಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳ ಈ ಆತಂಕಕ್ಕೆ ಕಾರಣವಾಗಿರುವ ಆ ಅಂಪೈರ್​ಗಳು ಯಾರು? ಅಭಿಮಾನಿಗಳ ಆತಂಕಕ್ಕೇನು ಕಾರಣ?

ಫೈನಲ್ ಪಂದ್ಯಕ್ಕೆ ವಿವಾದಿತ ಅಂಪೈರ್ ಗಳು
ಬಹು ನಿರೀಕ್ಷಿತ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್​ಗಳ ಹೆಸರನ್ನು ಐಸಿಸಿ ಅಂತಿಮಗೊಳಿಸಿದ್ದು, ರಿಚರ್ಡ್ ಕೆಟಲ್‌ಬರೋ, ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಜೋಯಲ್ ವಿಲ್ಸನ್ ಅವರನ್ನು ಫೈನಲ್ ಪಂದ್ಯಕ್ಕೆ ತೀರ್ಪುಗಾರರನ್ನಾಗಿ ನೇಮಿಸಿದೆ. ನವೆಂಬರ್ 19, ಭಾನುವಾರದಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಲಿದ್ದಾರೆ. ಇಂಗ್ಲಿಷ್ ಅಂಪೈರ್‌ಗಳಾದ ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಅವರನ್ನು ಆನ್-ಫೀಲ್ಡ್ ಅಂಪೈರ್‌ಗಳಾಗಿ ಹೆಸರಿಸಲಾಗಿದ್ದು, ಟ್ರಿನಿಡಾಡ್ ಮತ್ತು ಟೊಬಾಗೋದ ಜೋಯಲ್ ವಿಲ್ಸನ್ ಮೂರನೇ ಅಂಪೈರ್‌ನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಆಂಡಿ ಪೈಕ್ರಾಫ್ಟ್ ಅವರು ಫೈನಲ್‌ನಲ್ಲಿ ಮ್ಯಾಚ್ ರೆಫರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ವಿವಾದಿತ ಅಂಪೈರ್ ಇರುವ ಪಂದ್ಯಗಳಲ್ಲಿ ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು!
ವಾಸ್ತವವಾಗಿ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿರುವ ಆ ಇಬ್ಬರು ಅಂಪೈರ್​ಗಳೆಂದರೆ ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್. ಅದರಲ್ಲೂ ರಿಚರ್ಡ್ ಕೆಟಲ್‌ಬರೋ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಡಿರುವ 5 ನಾಕೌಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ದುರಾದೃಷ್ಟವಶಾತ್ ಆ ಐದೂ ಪಂದ್ಯಗಳಲ್ಲಿಯೂ ಭಾರತ ತಂಡ ಸೋತಿದೆ. ರಿಚರ್ಡ್ ಕೆಟಲ್‌ಬರೋ ಅವರ ಅಂಪೈರಿಂಗ್​ನಲ್ಲಿ ಟೀಂ ಇಂಡಿಯಾ 2014ರ ಟಿ20 ವಿಶ್ವಕಪ್ ಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2015ರ ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು 2019ರ ವಿಶ್ವಕಪ್ ಸೆಮಿಫೈನಲ್ ಆಡಿದ್ದು, ಈ ಐದೂ ಪಂದ್ಯಗಳಲ್ಲೂ ಟೀಂ ಇಂಡಿಯಾ ಸೋಲನುಭವಿಸಿತ್ತು. ವಾಸ್ತವವಾಗಿ ಈ ಇಬ್ಬರೂ 2019 ರಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ತೀರ್ಪುಗಾರರಾಗಿದ್ದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು.

ಇದೀಗ ಟೀಂ ಇಂಡಿಯಾ 11 ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದು, ರಿಚರ್ಡ್ ಕೆಟಲ್‌ಬರೋ ಅಂಪೈರ್ ಆಗಿ ನೇಮಕಗೊಂಡಿರುವುದು ಭಾರತೀಯ ಅಭಿಮಾನಿಗಳ ಭಯವನ್ನು ಹೆಚ್ಚಿಸಿದೆ.

ಮೊದಲ ಬಾರಿಗೆ ರಿಚರ್ಡ್ ಕೆಟಲ್‌ಬರೋ ಪಂದ್ಯದಲ್ಲಿ ಗೆದ್ದ ಭಾರತ
ಆದಾಗ್ಯೂ ಸಮಾಧಾನಕರ ಸಂಗತಿಯೆಂದರೆ, ಈ ಬಾರಿಯ ವಿಶ್ವಕಪ್​ನಲ್ಲಿ ಇವರ ಅಂಪೈರಿಂಗ್​ನಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಹಿಂದೆ ಅಂದರೆ ನವೆಂಬರ್ 15 ರಂದು ಮುಂಬೈನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ರಿಚರ್ಡ್ ಇಲಿಂಗ್‌ವರ್ತ್ ಆನ್-ಫೀಲ್ಡ್ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ ಆ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು. ಅಂತೆಯೇ ಮತ್ತೋರ್ವ ಅಂಪೈರ್ ರಿಚರ್ಡ್ ಕೆಟಲ್‌ಬರೋ ಇದೇ ವಿಶ್ವಕಪ್ ಟೂರ್ನಿಯ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲೂ ಅಂಪೈರಿಂಗ್ ಮಾಡಿದ್ದರು.

ಆ ಪಂದ್ಯವನ್ನೂ ಭಾರತ ಗೆದ್ದಿತ್ತು. ಅಷ್ಟು ಮಾತ್ರವಲ್ಲದೇ ಅಂದಿನ ಪಂದ್ಯದಲ್ಲಿ ಶತಕದಂಚಿನಲ್ಲಿದ್ದ ಭಾರತ ತಂಡದ ವಿರಾಟ್ ಕೊಹ್ಲಿಗೆ ಶತಕ ಪೂರ್ತಿ ಮಾಡದಂತೆ ತಡೆಯಲು ಬಾಂಗ್ಲಾದೇಶ ಬೌಲರ್ ನಜ್ಮುಲ್ ಹೊಸೈನ್ ಶಾಂತೋ ವೈಡ್ ಎಸೆದಿದ್ದರು. ಆದರೆ ಇದನ್ನು ಇದೇ ಅಂಪೈರ್ ರಿಚರ್ಡ್ ಕೆಟಲ್‌ಬರೋ ವೈಡ್ ಎಂದು ಘೋಷಿಸದೇ ಪರೋಕ್ಷವಾಗಿ ಕೊಹ್ಲಿ ಶತಕಕ್ಕೆ ನೆರವಾಗಿದ್ದರು. ಈ ಬಗ್ಗೆ ಭಾರಿ ಪರ-ವಿರೋಧ ಚರ್ಚೆಗಳಾಗಿದ್ದವು. ಬಳಿಕ ಅಂಪೈರ್ ತೀರ್ಪು ಐಸಿಸಿ ನಿಯಮಗಳ ಅನ್ವಯ ಸರಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT