ನವದೆಹಲಿ: ಅಹ್ಮದಾಬಾದ್ ನಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ವಿಶ್ವಕಪ್ ಫೈನಲ್ಸ್ ಪಂದ್ಯ ನಡೆಯುತ್ತಿದ್ದು, ಭಾರತ ಆಸ್ಟ್ರೇಲಿಯಾಗೆ 241 ರನ್ ಗಳ ಗುರಿ ನೀಡಿದೆ.
ಮೂರನೇ ವಿಶ್ವಕಪ್ ನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ಭಾರತದ ಕ್ರಿಕೆಟ್ ಮಂಡಳಿ ದೊಡ್ಡ ಯಡವಟ್ಟು ಮಾಡಿರುವುದು ವರದಿಯಾಗಿದೆ.
ಮೊದಲ ಬಾರಿಗೆ ವಿಶ್ವಕಪ್ ನ್ನು ಗೆದ್ದ ಭಾರತ ತಂಡದ ನಾಯಕನಾಗಿದ್ದ ಕಪಿಲ್ ದೇವ್ ಗೆ ಈ ಪಂದ್ಯಕ್ಕೆ ಆಹ್ವಾನ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಪಂದ್ಯ ಆರಂಭಕ್ಕೂ ಮುನ್ನ ಎಬಿಪಿ ನ್ಯೂಸ್ ಜೊತೆ ಮಾತನಾಡಿದ್ದ ಕಪಿಲ್ ದೇವ್, ತಮ್ಮನ್ನು ಫೈನಲ್ಸ್ ಪಂದ್ಯಕ್ಕಾಗಿ ಅಹ್ಮದಾಬಾದ್ ಗೆ ಆಹ್ವಾನಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ICC world cup 2023: ಪ್ಯಾಲೆಸ್ತೇನ್ ಪ್ರೇಮಿಯಿಂದ ಭದ್ರತೆ ಉಲ್ಲಂಘನೆ, ಕೊಹ್ಲಿಯತ್ತ ಧಾವಿಸಿದ ವ್ಯಕ್ತಿ!
ನೀವು ನನ್ನನ್ನು ಆಹ್ವಾನಿಸಿದ್ದೀರಿ ನಾನು ಬಂದಿದ್ದೀನಿ, ಅವರು ನನ್ನನ್ನು ಆಹ್ವಾನಿಸಿಲ್ಲ ನಾನು ಹೋಗಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.
ನನಗೆ 1983 ರ ವಿಶ್ವಕಪ್ ಆಡಿದ್ದ ಇಡೀ ತಂಡದ ಸದಸ್ಯರೊಂದಿಗೆ ಫೈನಲ್ಸ್ ಪಂದ್ಯ ವೀಕ್ಷಿಸಲು ಬಯಸಿದ್ದೆ. ಆದರೆ ಅಲ್ಲಿ ಬಹಳಷ್ಟು ಜವಾಬ್ದಾರಿಗಳಿರುತ್ತವೆ ಕೆಲವೊಮ್ಮೆ ಜನರು ಮರೆಯುತ್ತಾರೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಹೇಳಿದ್ದಾರೆ. ವಿಶ್ವಕಪ್ ನ ಅನೇಕ ವಿಜೇತ ತಂಡಗಳ ಮಾಜಿ ನಾಯಕರು ಈ ಪಂದ್ಯವನ್ನು ವೀಕ್ಷಿಸಲು ನೆರೆದಿದ್ದಾರೆ.