ಕ್ರಿಕೆಟ್

ಟ್ರಾವಿಸ್ ಹೆಡ್‌ ಪತ್ನಿ, ಪುತ್ರಿಗೆ ಅತ್ಯಾಚಾರ ಬೆದರಿಕೆ: ಇಂಡಿಯಾ ಫ್ಯಾನ್ಸ್ ವಿರುದ್ಧ ಮ್ಯಾಕ್ಸ್‌ವೆಲ್ ಪತ್ನಿ ಆಕ್ರೋಶ!

Nagaraja AB

ನವದೆಹಲಿ: ಭಾನುವಾರ ರಾತ್ರಿ ಅಹಮದಾಬಾದ್‌ನಲ್ಲಿ 2023 ಐಸಿಸಿ ವಿಶ್ವಕಪ್ ನ್ನು ಪ್ಯಾಟ್ ಕಮಿನ್ಸ್ ತಂಡ ಗೆದ್ದ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ.

ಫೈನಲ್ ನಲ್ಲಿ ಆಸ್ಟ್ರೇಲಿಯಾ ಪರ  137 ರನ್ ಗಳಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿದ್ದ ಟ್ರಾವಿಸ್ ಹೆಡ್ ಅವರ ಪತ್ನಿ ಹಾಗೂ ಮಗಳಿಗೆ ಅತ್ಯಾಚಾರದ ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾಗುತ್ತಿದೆ. 

ಅಲ್ಲದೇ, ದಕ್ಷಿಣ ಭಾರತದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್, ಭಾರತೀಯರಾಗಿದ್ದರೂ ಆಸೀಸ್‌ಗೆ ಬೆಂಬಲ ನೀಡಿದ್ದಕ್ಕಾಗಿ ನಿಂದನೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ವಿನಿ ರಾಮನ್, ಭಾರತೀಯ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಇದನ್ನು ನಂಬಲು ಸಾಧ್ಯವಿಲ್ಲ ಆದರೆ ನೀವು ಭಾರತೀಯರಾಗಬಹುದು, ನೀವು ಬೆಳೆದ ದೇಶವನ್ನು ಬೆಂಬಲಿಸಬಹುದು ಅಲ್ಲದೇ ಮುಖ್ಯವಾಗಿ ನಿಮ್ಮ ಪತಿ, ನಿಮ್ಮ ಮಗು ಆಡುವ ತಂಡವನ್ನು ಬೆಂಬಲಿಸಬಹುದು. ಚಿಲ್ ಮಾತ್ರೆ ತೆಗೆದುಕೊಳ್ಳಿ, ಹೆಚ್ಚಿನ ಮುಖ್ಯವಾದ ವಿಷಯದ ಕಡೆಗೆ ಆ ಆಕ್ರೋಶವಿರಲಿ ಎಂದು  ಇನ್ಸ್ಟಾಗ್ರಾಮ್ ನಲ್ಲಿ ವಿನಿ ರಾಮನ್ ಫೋಸ್ಟ್ ಮಾಡಿದ್ದಾರೆ. 

SCROLL FOR NEXT