ಕ್ರಿಕೆಟ್

ಮೊದಲ ಟಿ20: ಭಾರತಕ್ಕೆ ಗೆಲ್ಲಲು 209 ರನ್ ಬೃಹತ್ ಗುರಿ ನೀಡಿದ ಆಸ್ಟ್ರೇಲಿಯಾ

Srinivasamurthy VN

ವಿಶಾಖಪಟ್ಟಣ: ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಗೆಲ್ಲಲು 209 ರನ್ ಗಳ ಬೃಹತ್ ಗುರಿ ಪಡೆದಿದೆ.

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡ ನಿಗಧಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳನ್ನು ಕಲೆಹಾಕಿದ್ದು, ಭಾರತಕ್ಕೆ ಗೆಲ್ಲಲು 209 ರನ್ ಗಳ ಬೃಹತ್ ಗುರಿ ನೀಡಿದೆ.

ಆಸ್ಟ್ರೇಲಿಯಾ ಪರ ಸ್ಟೀವೆನ್ ಸ್ಮಿತ್ (52 ರನ್) ಮತ್ತು ಮ್ಯಾಥ್ಯೂ ಶಾರ್ಟ್ (13 ರನ್) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ 31ರನ್ ಕಲೆಹಾಕಿತು. ಈ ಹಂತದಲ್ಲಿ ರವಿ ಬಿಷ್ಣೋಯ್ ಬೌಲಿಂಗ್ ನಲ್ಲಿ ಮ್ಯಾಥ್ಯೂ ಶಾರ್ಟ್ ಔಟಾದರು. ಬಳಿಕ ಸ್ಮಿತ್ ಜೊತೆಗೂಡಿದ ಜಾಶ್ ಇಂಗ್ಲಿಸ್ ಭಾರತೀಯ ಬೌಲರ್ ಗಳ ಮೇಲೆ ಪಾರಮ್ಯ ಮೆರೆದರು.

ಕೇವಲ 50 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ ಇಂಗ್ಲಿಸ್ 110 ರನ್ ಗಳನ್ನು ಕಲೆಹಾಕಿ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಬೌಲಿಂಗ್ ನಲ್ಲಿ ಔಟಾದರು. ಈ ಹೊತ್ತಿಗಾಗಲೇ ಅರ್ಧಶತಕ ಸಿಡಿಸಿದ್ದ ಸ್ಮಿತ್ ಕೂಡ ರನೌಟ್ ಗೆ ಬಲಿಯಾದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗಧಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳನ್ನು ಕಲೆಹಾಕಿದ್ದು, ಭಾರತಕ್ಕೆ ಗೆಲ್ಲಲು 209 ರನ್ ಗಳ ಬೃಹತ್ ಗುರಿ ನೀಡಿದೆ.

ಭಾರತದ ಪರ ರವಿ ಬಿಷ್ಣೋಯ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.

SCROLL FOR NEXT