ಕ್ರಿಕೆಟ್

ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಸಿಕ್ಸರ್ ನಲ್ಲಿ ಹಿಟ್ ಮ್ಯಾನ್ ದಾಖಲೆ, 300 ಸಿಕ್ಸರ್ ಸಿಡಿಸಿದ 3ನೇ ಆಟಗಾರ ರೋಹಿತ್ ಶರ್ಮಾ

Srinivasamurthy VN

ಅಹ್ಮದಾಬಾದ್: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ನಾಯಕ ರೋಹಿತ್ ಶರ್ಮಾ, ಸಿಕ್ಸರ್ ಮೂಲಕವೇ ವಿಶೇಷ ದಾಖಲೆ ಬರೆದಿದ್ದಾರೆ.

ಹೌದು.. ರೋಹಿತ್ ಶರ್ಮಾ 50 ಓವರ್​ಗಳ ಏಕದಿನ ಕ್ರಿಕೆಟ್​​ನಲ್ಲಿ 300 ಸಿಕ್ಸರ್​ಗಳನ್ನು ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ (Rohit Sharma) ಪಾತ್ರರಾದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಈ ಮೈಲಿಗಲ್ಲನ್ನು ತಲುಪಿದ್ದಾರೆ.  

ಇಂದು ಪಾಕಿಸ್ತಾನ ನೀಡಿದ್ದ 192 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಆಸರೆಯಾದರು. 63 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 6 ಸಿಕ್ಸರ್ ಮತ್ತು 6 ಬೌಂಡರಿಗಳ ಮೂಲಕ 86ರನ್ ಗಳಿಸಿದರು. ಆ ಮೂಲಕ ಏಕದಿನದಲ್ಲಿ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 300ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 300 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಮತ್ತು ಜಗತ್ತಿನ 3ನೇ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.

ಇತ್ತೀಚೆಗೆ, ಅಫ್ಘಾನಿಸ್ತಾನ ಪಂದ್ಯದಲ್ಲಿ, ಅವರು 554 ಸಿಕ್ಸರ್​ಗಳ ಮೂಲಕ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಫಿರೋಜ್ ಷಾ ಕೋಟ್ಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ 81 ಎಸೆತಗಳಲ್ಲಿ 131 ರನ್ ಗಳಿಸಿದ ರೋಹಿತ್ ಐದು ಸಿಕ್ಸರ್ ಗಳನ್ನು ಬಾರಿಸಿ 556 ಸಿಕ್ಸರ್​ಗಳ ಗುರಿ ದಾಟಿಸಿದ್ದರು.

ಪಾಕಿಸ್ತಾನದ ಬ್ಯಾಟ್ಸ್​ಮನ್​ ಶಾಹಿದ್ ಅಫ್ರಿದಿ ಏಕದಿನ ಕ್ರಿಕೆಟ್​​ನಲ್ಲಿ 351 ಸಿಕ್ಸರ್​ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್​​ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ 50 ಓವರ್​ಗಳ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಅಫ್ರಿದಿ ನಂತರದ ಸ್ಥಾನದಲ್ಲಿದ್ದಾರೆ.

ಫಿರೋಜ್ ಷಾ ಕೋಟ್ಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ 81 ಎಸೆತಗಳಲ್ಲಿ 131 ರನ್ ಗಳಿಸಿದ ರೋಹಿತ್ ಮೂರು ಸ್ವರೂಪದ ಕ್ರಿಕೆಟ್​ನಲ್ಲಿ 556 ಸಿಕ್ಸರ್​ಗಳ ಗುರಿ ತಲುಪಿದ್ದರು. ರೋಹಿತ್ 453 ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಇದು ಗೇಲ್​ಗಿಂತ 30 ಪಂದ್ಯಗಳು ಕಡಿಮೆ.
 

SCROLL FOR NEXT