ಅಹಮದಾಬಾದ್: 2023ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ 191 ರನ್‌ಗಳಿಗೆ ಆಲೌಟ್ ಆಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಟೀಂ ಇಂಡಿಯಾದ ಬೌಲರ್‌ಗಳ ದಾಳಿಗೆ ತತ್ತರಿಸಿತು.
ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಪಾಕ್ ಪರ ನಾಯಕ ಬಾಬರ್ ಅಜಮ್ ಅರ್ಧಶತಕ ಗಳಿಸಿದರು. ಮೊಹಮ್ಮದ್ ರಿಜ್ವಾನ್ 49 ರನ್ ಗಳಿಗೆ ಔಟ್ ಆದರು. ಇನ್ನುಳಿದಂತೆ ಅಬ್ದುಲ್ಲಾ ಶಫೀಕ್ 20, ಇಮಾಮ್ ಉಲ್ ಹಕ್ 36 ಹಾಗೂ ಹಸನ್ ಅಲಿ 12 ರನ್ ಗೆ ಔಟಾಗಿದ್ದಾರೆ.
ಇದನ್ನೂ ಓದಿ: 'ಶೇ.99ರಷ್ಟು'..: ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಶುಭ್ ಮನ್ ಗಿಲ್ ಲಭ್ಯತೆ ಕುರಿತು ನಾಯಕ ರೋಹಿತ್ ಶರ್ಮಾ ಮಹತ್ವದ ಮಾಹಿತಿ!!
ಬಾಬರ್ ಮತ್ತು ರಿಜ್ವಾನ್ ಔಟಾದ ನಂತರ, ತಂಡವು ಸರ್ವಪತನದತ್ತ ಸಾಗಿತು. ಇಫ್ತಿಕರ್ ಅಹ್ಮದ್ 4 ರನ್ ಗಳಿಸಿ ಔಟಾದರು. ಶಾದಾಬ್ ಖಾನ್ 2 ರನ್ ಗಳಿಸಿದರೆ ಮೊಹಮ್ಮದ್ ರಿಜ್ವಾನ್ 4 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಹಸನ್ ಅಲಿ 12 ರನ್ ಗಳಿಸಿ ಔಟಾದರೆ, ಶಾಹೀನ್ ಅಫ್ರಿದಿ 2 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಇಡೀ ತಂಡವೇ ಆಲೌಟ್ ಆಗಿತ್ತು.
ಭಾರತೀಯ ಬೌಲರ್‌ಗಳು ಮಾರಕ ಪ್ರದರ್ಶನ
ಅಹಮದಾಬಾದ್‌ನಲ್ಲಿ ಪಾಕಿಸ್ತಾನದ ಮೇಲೆ ಭಾರತದ ಬೌಲರ್‌ಗಳು ಪ್ರಾಬಲ್ಯ ಮೆರೆದರು. ಜಸ್ಪ್ರೀತ್ ಬುಮ್ರಾ 7 ಓವರ್‌ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಅವರು ಮೇಡನ್ ಓವರ್ ಬೌಲ್ ಮಾಡಿದರು. ಮೊಹಮ್ಮದ್ ಸಿರಾಜ್ 8 ಓವರ್ ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ 6 ಓವರ್ ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಕುಲದೀಪ್ ಯಾದವ್ 10 ಓವರ್ ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ 9.5 ಓವರ್ ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು.