ಕ್ರಿಕೆಟ್

ಐಸಿಸಿ ವಿಶ್ವಕಪ್: ಪಾಕ್ ಗೆ ಮತ್ತೊಂದು ಹೀನಾಯ ಸೋಲು; 8 ವಿಕೆಟ್ ಗಳಿಂದ ಅಪ್ಘಾನ್ ಗೆಲುವು, ಹೊಸ ಇತಿಹಾಸ!

Nagaraja AB

ಚೆನ್ನೈ: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಮತ್ತೊಂದು ಹೀನಾಯ ಸೋಲಾಗಿದೆ. ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ  22ನೇ ಪಂದ್ಯದಲ್ಲಿ ಅಪ್ಘಾನಿಸ್ತಾನ 8 ವಿಕೆಟ್ ಗಳಿಂದ ಗೆದ್ದು ಬೀಗಿದೆ. ಇದು ಪಾಕಿಸ್ತಾನ ವಿರುದ್ಧ 8 ಪಂದ್ಯಗಳಲ್ಲಿ ಅಪ್ಘಾನಿಸ್ತಾನಕ್ಕೆ ಮೊದಲ ಏಕದಿನ ಗೆಲುವು ಆಗಿದೆ.  ಈ ಮೂಲಕ ಹೊಸ ಇತಿಹಾಸ ಬರೆದಿದೆ. 

ಹೌದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ಪಾಕ್ ಪರ ಅಬ್ದುಲ್ ಶಫೀಕ್ 58, ನಾಯಕ ಬಾಬರ್ ಅಜಾಮ್ 74, ಶದಾಬ್ ಖಾನ್ ಹಾಗೂ ಇಫ್ತೀಕರ್ ಅಹ್ಮದ್ ತಲಾ 40 ರನ್ ಗಳಿಸಿದದ್ದು ಹೊರತುಪಡಿಸದರೆ ಉಳಿದ ಯಾವುದೇ ಆಟಗಾರರು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದಾಗಿ ಅಪ್ಘಾನಿಸ್ತಾನ ಗೆಲ್ಲಲು 283 ರನ್ ಗಳ ಗುರಿ ನೀಡಿತು.

ಪಾಕ್ ನೀಡಿದ ಗುರಿ ಬೆನ್ನಟ್ಟಿದ್ದ ಅಪ್ಘಾನಿಸ್ತಾನದ ಮೂವರು  ಆರಂಭಿಕ ಆಟಗಾರರು ಆಕರ್ಷಕ ಅರ್ಧಶತಕ ಬಾರಿಸಿದರು.  ರಹಮನುಲ್ಲಾ ಗುರ್ಬಾಜ್ 65, ಇಬ್ರಾಹಿಂ ಜಾರ್ಡನ್ 87 ,ರಹಮತ್ ಶಾ 77 ರನ್ ಗಳಿಸಿದರೆ ಹಸಮತ್ ಉಲ್ಲಾ ಶಹೀದ್ 48 ರನ್ ಗಳಿಸಿದರು ಪರಿಣಾವಾಗಿ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 2ವಿಕೆಟ್ ನಷ್ಟಕ್ಕೆ 286 ರನ್ ಗಳಿಸುವ ಅಪ್ಘಾನಿಸ್ತಾನ ಗೆಲುವಿನ ನಗೆ ಬೀರಿತು. ಈ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು. 

SCROLL FOR NEXT