ಗ್ರೇಗ್ ಚಾಪೆಲ್ (ಸಂಗ್ರಹ ಚಿತ್ರ) 
ಕ್ರಿಕೆಟ್

ಟೀಂ ಇಂಡಿಯಾ ಮಾಜಿ ಕೋಟ್ ಗ್ರೇಗ್ ಚಾಪೆಲ್ ಗೆ ಆರ್ಥಿಕ ಸಂಕಷ್ಟ; ನೆರವಿಗೆ ಮುಂದಾದ ಸ್ನೇಹಿತರು

ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಮಾಜಿ ಕೋಟ್ ಗ್ರೇಗ್ ಚಾಪೆಲ್ ಗೆ ಅವರ ಕ್ರಿಕೆಟ್ ಲೋಕದ ಸ್ನೇಹಿತರು ನೆರವಿಗೆ ಮುಂದಾಗಿದ್ದು, ನಿಧಿ ಸಂಗ್ರಹದ ಮೂಲಕ ನೆರವಿಗೆ ಮುಂದಾಗಿದ್ದಾರೆ.

ಸಿಡ್ನಿ: ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಮಾಜಿ ಕೋಟ್ ಗ್ರೇಗ್ ಚಾಪೆಲ್ ಗೆ ಅವರ ಕ್ರಿಕೆಟ್ ಲೋಕದ ಸ್ನೇಹಿತರು ನೆರವಿಗೆ ಮುಂದಾಗಿದ್ದು, ನಿಧಿ ಸಂಗ್ರಹದ ಮೂಲಕ ನೆರವಿಗೆ ಮುಂದಾಗಿದ್ದಾರೆ.

ಗ್ರೆಗ್​ ಚಾಪೆಲ್(Greg Chappell)​ ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ(Facing Financial Struggle) ಸಿಲುಕಿದ್ದು, ನಿಧಿ ಸಂಗ್ರಹದ ಮೂಲಕ ಅವರಿಗೆ ನೆರವಾಗಲು ಗೆಳೆಯರು ಆನ್​ಲೈನ್​ ಅಭಿಯಾನ ಆರಂಭಿಸಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಚಾಪೆಲ್​ಗೆ “ಗೋಫಂಡ್​ಮೀ’ ಪೇಜ್​ ಮೂಲಕ ಅವರ ಗೆಳೆಯರು ನಿಧಿ ಸಂಗ್ರಹಿಸುತ್ತಿದ್ದು, ಇದಕ್ಕೆ ಅವರ ಸಹೋದರರು ಹಾಗೂ ಮಾಜಿ ಕ್ರಿಕೆಟಿಗರಾದ ಇಯಾನ್​ ಮತ್ತು ಟ್ರೆವರ್​ ಚಾಪೆಲ್​ ಕೂಡ ಕೈಜೋಡಿಸಿದ್ದಾರೆ.

ಈ ಹಿಂದೆ “ನಾನು ಬಡವನೆಂದು ಕಣ್ಣೀರು ಹಾಕುತ್ತಿಲ್ಲ. ಆದರೆ ಈಗಿನ ಕ್ರಿಕೆಟಿಗರು ಅನುಭವಿಸುತ್ತಿರುವ ಶ್ರೀಮಂತ ಜೀವನ ನನ್ನದಲ್ಲ” ಎಂದು ಚಾಪೆಲ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೆ ತನ್ನ ಕಾಲದ ಕ್ರಿಕೆಟಿಗರ ಪೈಕಿ ತಾನೊಬ್ಬನೇ ಈ ಪರಿಸ್ಥಿತಿಯನ್ನು ಎದುರಿಸುತಿಲ್ಲ, ಇನ್ನೂ ಅನೇಕರು ಇದೇ ರೀತಿಯ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದಿದ್ದರು.

ಇನ್ನು ಈ ಹಿಂದೆ ಟೀಂ ಇಂಡಿಯಾ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ ಭಾರತ ತಂಡವನ್ನು ಆಸ್ಟ್ರೇಲಿಯಾದಂತೆ ಮಾಡುತ್ತೇನೆ ಎಂದು ಭಾರತ ತಂಡವನ್ನು ತಮ್ಮ ಎಡವಟ್ಟು ನಿರ್ಧಾರಗಳಿಂದ ಹಳ್ಳಹಿಡಿಸಿದ್ದರು. ಆಸ್ಟ್ರೇಲಿಯಾದ ಮಾಜಿ ಆಟಗಾರನಾಗಿರುವ 75 ವರ್ಷದ ಗ್ರೇಗ್ ಚಾಪೆಲ್​ ಅವರು 2005ರಿಂದ 2007ರ ಅವಧಿಯಲ್ಲಿ ಭಾರತ ತಂಡದ ಪ್ರಧಾನ ಕೋಚ್​ ಆಗಿದ್ದರು.

ಇವರು ಕೋಚಿಂಗ್​ಗಿಂತ ವಿವಾದದಲ್ಲೇ ಹೆಚ್ಚು ಸುದ್ದಿಯಾಗಿದ್ದರು. ಸೌರವ್​ ಗಂಗೂಲಿ ಜತೆಗಿನ ಕಿತ್ತಾಟದಿಂದ ಕೊನೆಗೆ ಕೋಚಿಂಗ್​ ಹುದ್ದೆಯನ್ನೇ ತ್ಯಜಿಸಿದ್ದರು. ಭಾರತ ತಂಡ ಕಂಡ ಅತ್ಯಂತ ಕೆಟ್ಟ ಕೋಚ್​ ಇವರಾಗಿದ್ದರು. ಬಲಿಷ್ಠ ಭಾರತ ತಂಡವನ್ನು ಒಂದು ಹಂತದಲ್ಲಿ ಸರ್ವನಾಶ ಮಾಡಿದ್ದು ಇದೇ ಚಾಪೆಲ್​ ಎಂದು ಈಗಲೂ ಕೆಲ ಮಾಜಿ ಆಟಗಾರರು ಕಿಡಿಕಾರುತ್ತಾರೆ.

ಇದೇ ವಿಚಾರವಾಗಿ ಕ್ರಿಕೆಟ್​ನ ಸವ್ಯ ಸಾಚಿ ಸಚಿನ್‌ ತೆಂಡೂಲ್ಕರ್​ ಕೂಡ ಚಾಪೆಲ್‌ ಕೋಚ್‌ ಅಗಿದ್ದ ಎರಡು ವರ್ಷ ಭಾರತೀಯ ಕ್ರಿಕೆಟ್‌ ಅತ್ಯಂತ ಕಷ್ಟದ ವಾತಾವರಣವನ್ನು ಎದುರಿಸಿತ್ತು ಎಂದು ಹಿಂದೊಮ್ಮೆ ಹೇಳಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT