ಕ್ರಿಕೆಟ್

'ವಿಶ್ವಕಪ್ ನಲ್ಲಿ ನಮ್ಮದು ಕಳಪೆ ಪ್ರದರ್ಶನ: ಬಾಂಗ್ಲಾದೇಶದ ನಾಯಕ ವಿಷಾದ

Nagaraja AB

ಕೋಲ್ಕತ್ತಾ: ಈ ಬಾರಿಯ ವಿಶ್ವಕಪ್ ನಲ್ಲಿ ತಮ್ಮ ತಂಡದ ಕಳಪೆ ಪ್ರದರ್ಶನಕ್ಕೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ವಿಷಾದ ವ್ಯಕ್ತಪಡಿಸಿದ್ದಾರೆ. 

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 87 ರನ್‌ಗಳಿಂದ ಸೋತ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಲ್ ಹಸನ್, ಇದು ಬಾಂಗ್ಲಾದೇಶದ ಅತ್ಯಂತ ಕಳಪೆ ವಿಶ್ವಕಪ್ ಪ್ರದರ್ಶನವಾಗಿದೆ. ನೀವು ಅದನ್ನು ಖಂಡಿತವಾಗಿ ಹೇಳಬಹುದು ಎಂದರು. 

ಏಕೆ ಈ ರೀತಿ ಆಡಿದ್ದೇವೆ ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ.  ಮೈದಾನದಲ್ಲಿ ನಾವು ನಿರ್ಲಕ್ಷ್ಯವಹಿಸಿದೆವು,  ಅದ್ಭುತವಾಗಿ ಬೌಲಿಂಗ್ ಮಾಡಿದ್ದೇವೆ. ಪಂದ್ಯಾವಳಿಯ ಉದ್ದಕ್ಕೂ ಬ್ಯಾಟಿಂಗ್ ಮಾಡುವ ರೀತಿಯಲ್ಲಿ ಬ್ಯಾಟಿಂಗ್ ಮಾಡಿಲ್ಲ ಇದು ದೊಡ್ಡ ಕಳವಳವಾಗಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಸೋಲು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ ಎಂದರು.

ತಮೀಮ್ ಇಕ್ಬಾಲ್ ಹೊರಗಿಡುವಿಕೆಯು ತಂಡದ ಮೇಲೆ ಪರಿಣಾಮ ಬೀರಿದೆಯೇ ಎಂದು ಕೇಳಿದಾಗ, "ಅದು ಆಗಿರಬಹುದು" ಎಂದು ಶಕೀಬ್ ಹೇಳಿದರು. ಇದು ಸಹಜ. ಪ್ರತಿಯೊಬ್ಬರ ಹೃದಯದಲ್ಲಿ ಏನಿದೆ ಎಂದು ನನಗೆ ತಿಳಿದಿಲ್ಲ. ಇದು ಪರಿಣಾಮ ಬೀರಿರಬಹುದು ಎಂದು ತಿಳಿಸಿದರು.

SCROLL FOR NEXT